×
Ad

ಶಿಕ್ಷಕರ, ಪದವೀಧರರ ಕ್ಷೇತ್ರಗಳಲ್ಲಿ ಜೆಡಿಎಸ್‌, ಬಿಜೆಪಿ ಜಯಭೇರಿ, ಕಾಂಗ್ರೆಸ್ ಗೆ ಮುಖಭಂಗ

Update: 2016-06-14 11:01 IST

ಬೆಂಗಳೂರು, ಜೂ.14: ವಿಧಾನ ಪರಿಷತ್‌ನ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ತಲಾ ಎರಡು ಸ್ಥಾನಗಳನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಟಿ. ಶ್ರೀಕಂಠೇಗೌಡ ಮತ್ತು ಪಶ್ಚಿಮ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್​ನ ಬಸವರಾಜ ಹೊರಟ್ಟಿ , ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಮರು ಆಯ್ಕೆಯಾಗಿದ್ದರೆ, ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಹಣಮಂತ ನಿರಾಣಿ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದಾರೆ
ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಟಿ. ಶ್ರೀಕಂಠೇಗೌಡ ಅವರು ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್  ಅವರ ವಿರುದ್ಧ  1816 ಹೆಚ್ಚಿಗೆ ಮತಗಳನ್ನು ಸಂಪಾದಿಸಿ ಜಯ ದಾಖಲಿಸಿದರು.  ಕಾಂಗ್ರೆಸ್ ಅಭ್ಯರ್ಥಿ ಡಾ. ರವೀಂದ್ರ ತೀವ್ರ ಮುಖಭಂಗ ಅನುಭವಿಸಿದರು. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಯಾರಿಗೂ ಜಯ ದೊರೆಯಲಿಲ್ಲ. ಎರಡನೆ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕೆ.ಟಿ.ಶ್ರೀಕಂಠೇಗೌಡ ಜಯ ಗಳಿಸಿದರು
ಅಭ್ಯರ್ಥಿಗಳು ಪಡೆದ ಮತಗಳ ವಿವರ
ಕೆ.ಟಿ. ಶ್ರೀಕಂಠೇಗೌಡ (ಜೆಡಿಎಸ್:) 21,544 ಮತಗಳು
ಮೈ.ವಿ. ರವಿಶಂಕರ್  (ಬಿಜೆಪಿ) 19,728 ಮತಗಳು
ಡಾ. ರವೀಂದ್ರ (ಕಾಂಗ್ರೆಸ್) 9,323 ಮತಗಳು
ಭಗವಾನ್: 2646
ವಾಟಾಳ್ ನಾಗರಾಜ್: 835 ಮತಗಳು
ಹೊರಟ್ಟಿಗೆ ಏಳನೆ ಬಾರಿ ಗೆಲುವು: ಪಶ್ಚಿಮ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್​ನ ಬಸವರಾಜ ಹೊರಟ್ಟಿ 3431 ಮೊದಲ ಪ್ರಾಶಸ್ಱದ ಮತಗಳಿಂದ ಭರ್ಜರಿ ಗೆಲುವು ದಾಖಲಿಸಿ, ಏಳನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದರು.
ಕಣದಲ್ಲಿದ್ದ 8 ಅಭ್ಯರ್ಥಿಗಳು ಪಡೆದ ಮತಗಳು
ಬಸವರಾಜ ಹೊರಟ್ಟಿ  (ಜೆಡಿಎಸ್) 7480
 ಪ್ರೊ. ಎಂ. ನಾಗರಾಜ (ಬಿಜೆಪಿ )4371 
ಟಿ.ಈಶ್ವರ (ಕಾಂಗ್ರೆಸ್​) 1352
ಜಿ.ಸಿ. ಪಾಟೀಲ ( ಸರ್ವ ಜನತಾ ಪಕ್ಷ) 6
ರಾಜು ಕಾಂಬಳೆ( ಆಝಾದ್ ಮಜ್ದೂರ್ ಕಿಸಾನ್ ಪಾರ್ಟಿ) 4
ಪ್ರೊ. ಆರ್.ಎಂ. ಕುಬೇರಪ್ಪ (ಪಕ್ಷೇತರ) 883
ದುರದುಂಡೇಶ್ವರ ಬಸರಕೋಡ(ಪಕ್ಷೇತರ)  5 
 ಶಿವಕುಮಾರ (ಪಕ್ಷೇತರ )43 
ವಾಯವ್ಯದಲ್ಲಿ ನಿರಾಣಿ, ಶಹಾಪುರ ವಿಜಯ

ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿದೆ.ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಮತ್ತೊಮ್ಮೆ ಮೇಲ್ಮನೆ   ಪ್ರವೇಶಿಸಿದ್ದಾರೆ.  ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಹಣಮಂತ ನಿರಾಣಿ  ಗೆಲುವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News