×
Ad

ಅಂಕೋಲಾ: ಅಧಿಕೃತವಾಗಿ ಚಾಲನೆಗೊಳ್ಳದ ಬಾರ್ಜ್‌

Update: 2016-06-14 23:14 IST

ಅಂಕೋಲಾ, ಜೂ.14: ಮಂಜಗುಣಿ-ಗಂಗಾವಳಿ ನಡುವೆ ಬಾರ್ಜ್ ಸಂಚಾರಕ್ಕೆ ಕಳೆದ 20 ದಿನಗಳ ಹಿಂದೆ ಪ್ರಾಯೋಗಿಕ ಚಾಲನೆ ನೀಡಿದ್ದರು. ಆದರೆ ಸೋಮವಾರದಿಂದ ಮತ್ತೆ ಪ್ರಾಯೋಗಿಕ ಚಾಲನೆ ಬಾರ್ಜ್ ಬಂದರು ಇಲಾಖೆಯಲ್ಲಿ ನಡೆಸಲಾಗುತ್ತಿದ್ದು ಯಾವುದೇ ರಶೀದಿ ಇಲ್ಲದೇ ಅಕ್ರಮವಾಗಿ ಹಣ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಬ್ಬ ವ್ಯಕ್ತಿಗೆ 5 ರೂ., ಬೈಕ್‌ಗೆ 10 ರೂ. ಹೀಗೆ ಬೇರೆ ಬೇರೆ ವಿವಿಧ ದರವನ್ನು ತಾವೇ ನಿಗದಿ ಪಡಿಸಿಕೊಂಡು ಸೋಮವಾರದಿಂದ ಬಾರ್ಜ್ ಆರಂಭಗೊಳಿಸಿದ್ದಾರೆ. ಮಂಗಳೂರಿನ ಹಂಗಾರಕಟ್ಟೆಯಲ್ಲಿ ಬಾರ್ಜ್ ನಿರ್ಮಾಣಗೊಂಡು 6 ತಿಂಗಳ ನಂತರ ಜನರ ಒತ್ತಡದ ಮೇರೆಗೆ ಗಂಗಾವಳಿಗೆ ತಂದು ನಿಲ್ಲಿಸಲಾಗಿದೆ. ಎರಡು ಕಡೆಗೂ ಧಕ್ಕೆ ಕೂಡ ನಿರ್ಮಾಣಗೊಂಡಿದೆ. ಆದರೆ ಸೊಂಬೇರಿ ಅಧಿಕಾರಿಗಳಿಂದ ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಳಿಸಿ ಬಾರ್ಜ್ ಸೇವೆ ಆರಂಭಿಸಿಲ್ಲ. ಯಾವುದೇ ರಶೀದಿ ಇಲ್ಲದೇ ಪಡೆಯಲಾಗುವ ಹಣ ಯಾರಿಗೆ ಸೇರುತ್ತದೆ ಎನ್ನುವುದೇ ಪ್ರಶ್ನೆಯಾಗಿದೆ. ಕಾರವಾರ ಮತ್ತು ಹೊನ್ನಾವರ ಬಂದರು ಇಲಾಖೆಯಿಂದ ಇಬ್ಬರು ಸಿಬ್ಬಂದಿ ಈ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ಕೇಳಿದರೆ ಕಾರವಾರ ಬಂದರು ಅಧಿಕಾರಿ ನಾರಾಯಣಪ್ಪ ಸೂಚನೆ ಮೇರೆಗೆ ತಾವು ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು. ಮಂಜಗುಣಿಯ ಕೆಲವು ಗ್ರಾಮಸ್ಥರು ಮಂಗಳವಾರ ಬಾರ್ಜ್ ನಡೆಸುತ್ತಿರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಅಧಿಕೃತವಾಗಿ ಬಾರ್ಜ್ ಆರಂಭಿಸುವಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News