ತರೀಕೆರೆ: ರಮಝಾನ್ ಕಿಟ್ ವಿತರಣೆ
Update: 2016-06-14 23:36 IST
ತರೀಕೆರೆ, ಜೂ.14: ಪಟ್ಟಣದ ಸಾಹುಕಾರ್ ಮಸೀದಿಯಲ್ಲಿ ರಮಝಾನ್ ಅಂಗವಾಗಿ ಎಸೆಸ್ಸೆಫ್ ಹಾಗೂ ಎಸ್‌ವೈಎಸ್ ವತಿಯಿಂದ ದುರ್ಬಲ ವರ್ಗದವರಿಗೆ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹುಕಾರ್ ಮಸೀದಿಯ ಉಸ್ತಾದ್ ಅಬ್ದುಲ್ ರಶೀದ್ ಸಖಾಫಿ ಮಾತನಾಡಿ, ಉಳ್ಳವರು ದುರ್ಬಲ ವರ್ಗದವರ ಅಶೋತ್ತರಗಳನ್ನು ಈಡೇರಿಸಿದಾಗ ಸಿಗುವ ಸುಖ ಅವಿಸ್ಮರಣೀಯ ಎಂದರು.
ಕಾಸರಗೋಡು ಜಿಲ್ಲೆಯ ಮುಹಿಮ್ಮಾತ್ ಇಸ್ಲಾಮಿಕ್ ಕಾಲೇಜಿನ ಮುಖ್ಯಸ್ಥ ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ ದುವಾ ನಡೆಸಿಕೊಟ್ಟರು. ತಾಪಂ ಮಾಜಿ ಸದಸ್ಯ ರಹ್ಮಾನ್, ವೌಲಾನ ಕಲೀಮುಲ್ಲಾ ರಝ್ವಿ, ಹಿನಾಯತುಲ್ಲಾ, ಸಂಘಟನೆಗಳ ಮುಖಂಡರಾದ ಹೈದರ್, ವಝೀರ್, ರಫೀಕ್, ವೈ.ಖಾದರ್, ಸಾದಿಕ್ ರಝ್ವಿ, ಅಮಾನುಲ್ಲಾ, ಖಾದರ್, ಇದಿನಬ್ಬ, ಉಮರ್ ಮತ್ತಿತರರು ಉಪಸ್ಥಿತರಿದ್ದರು.