×
Ad

ಪೌರಕಾರ್ಮಿಕರ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ: ದೇವರಾಜಶೆಟ್ಟಿ

Update: 2016-06-16 23:00 IST

ಚಿಕ್ಕಮಗಳೂರು ಜೂ.16: ಸಾಂಕ್ರಾಮಿಕ ರೋಗದಿಂದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಪೌರಕಾರ್ಮಿಕರು ಗುಣಮುಖರಾಗಲು ಹೆಚ್ಚಿನ ಕೆಲವು ಔಷಧಿಗಳಿಗೆ ನಗರಸಭೆಯಿಂದ ಚಿಕಿತ್ಸಾ ವೆಚ್ಚ ಭರಿಸುವುದಾಗಿ ನಗರಸಭಾ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ತಿಳಿಸಿದ್ದಾರೆ.

ಅವರು ಗುರುವಾರ ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೈ ಕೈ ನೋವಿನಿಂದ ಬಳಲಿ ಶಂಕಿತ ಚಿಕುನ್ ಗುನ್ಯಾದ ಭೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೌರ ಕಾರ್ಮಿಕರನ್ನು ಭೇಟಿ ಮಾಡಿ ಹಣ್ಣು ವಿತರಿಸಿ ಮಾತನಾಡಿ, ಕಳೆದ ವಾರದಲ್ಲಿ ತಾವು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಪೌರಕಾರ್ಮಿಕರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕುನ್ ಗುನ್ಯಾ ಭೀತಿಯಲ್ಲಿರುವ ಪೌರಕಾರ್ಮಿಕರಿಗೆ ಈ ಆಸ್ಪತ್ರೆಯಲ್ಲಿ ದೊರೆಯದ ಔಷಧಿಗಳನ್ನು ಹೊರಗಿನಿಂದ ತಂದವರಿಗೆ ಅದರ ವೆಚ್ಚವನ್ನು ಭರಿಸಲಾಗುವುದು ಎಂದು ಭರವಸೆ ನೀಡಿದರು.

ನಗರದ ಸ್ವಚ್ಛತೆಗೆ ನಿತ್ಯ ಶ್ರಮಪಡುವ ಪೌರ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖ ರಾಗಲು ಮಾನವೀಯತೆ ನೆಲೆಯಲ್ಲಿ ಸಹಕರಿಸುವಂತೆ ವೈದ್ಯರೊಂದಿಗೆ ಮಾತುಕತೆ ನಡೆಸಲಾಗಿದೆ. ನಾಲ್ಕೈದು ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದು, 3ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.

ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ಸಾಮಾನ್ಯ ಅದನ್ನು ತಡೆಗಟ್ಟಲು ನಗರಸಭೆಯಿಂದ ಸ್ವಚ್ಛತೆಗೆ ಮೊದಲ ಆದ್ಯತೆ ನೀಅಗತ್ಯವಿರುವ ಎಲ್ಲ ಬಡಾವಣೆಗಳಲ್ಲೂ ಫಾಗಿಂಗ್ ಮತ್ತು ಚರಂಡಿಗಳಿಗೆ ಔಷಧಿ ಸಿಂಪರಣೆ ಮಾಡಿ ರೋಗ ತಡೆಗಟ್ಟಲು ಮುಂಜಾಗ್ರತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಬಿಸಿ ನೀರು ಪೂರೈಸಿ: ನಗರದ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿ ನೀರು ಪೂರೈಕೆ ಮಾಡಬೇಕು. ಉದಾಸೀನ ತೋರಿದರೆ ಅಂತಹ ಹೋಟೆಲ್‌ಗಳನ್ನು ಬೀಗ ಹಾಕಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತಮ್ಮ ಅಕ್ಕ ಪಕ್ಕದ ಪರಿಸರ ಸ್ವಚ್ಛಂದವಾಗಿಟ್ಟುಕೊಳ್ಳಲು ಎಲ್ಲರೂ ಸಹಕರಿಸಬೇಕು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಭುಜೇಂದ್ರರಾಜ್ ಅರಸ್, ಸದಸ್ಯ ರಾದ ಟಿ.ರಾಜಶೇಖರ್, ಪುಷ್ಪರಾಜ್, ಪೌರಾಯುಕ್ತೆ ಕೆ.ಆರ್.ಪಲ್ಲವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News