×
Ad

ಅರ್ಹ ಜೇನು ಕುರುಬರಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ

Update: 2016-06-17 23:26 IST

 ಕುಶಾಲನಗರ, ಜೂ.17: 1987 ರಿಂದಲೂ ಜೇನು ಕುರುಬರ ಹಾಡಿಯ ಜನರಿಗಾಗಿ ಸಂಘಟನೆಗಳನ್ನು ರೂಪಿಸಿಕೊಂಡು ಹೋರಾಟ ನಡೆಸಿದ ಫಲವಾಗಿ 2006ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗಿರಿಜನರಿಗೆ ಅರಣ್ಯದಲ್ಲಿ ನೆಲೆಸಿರುವ ಭಾಗಗಳಲ್ಲಿನ ಕೆಲವು ಕುರುಹುಗಳನ್ನಾಧರಿಸಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೇ ಕಾರ್ಯ ನಡೆಸಿ ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳ ಅರ್ಹರಿಗೆ ಹಕ್ಕು ಪತ್ರಗಳನ್ನು ವಿತರಿಸ ಲಾಯಿತು. ಅಲ್ಲದೆ, ಕುಶಾಲನಗರ ಸಮೀಪದ ಯಡವನಾಡು ಕೂಪಾಡಿ ಹಾಡಿಯಲ್ಲಿ ನೆಲೆಸಿರುವ 25-30 ುಟುಂಬಗಳು ಹಕ್ಕು ಪತ್ರಗಳಿಗಾಗಿ ಕಳೆದ ಸುಮಾರು 30 ವರ್ಷಗಳಿಂದ ಸರಕಾರಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದರು. ಯಾವುದೇ ಕಾರ್ಯತಂತ್ರಗಳು ಫಲಿಸದೆ ಇದ್ದಾಗ ಕಳೆದ ಹತ್ತು ದಿನಗಳ ಹಿಂದೆ ಹಾಡಿಯ ಜೇನು ಕುರುಬರು ಪ್ರತಿ

ಭಟನೆ ನಡೆಸಿ ಅಧಿಕಾರಿಗಳಿಗೆ ಗಡುವು ನೀಡಿದ ಫಲವಾಗಿ ಇಂದು ಅರಣ್ಯ ಇಲಾಖೆ ಸೋಮವಾರಪೇಟೆ ಕಂದಾಯ ಇಲಾಖೆ ಅಧಿಕಾರಿಗಳು ಜಿ.ಪಿ.ಎಸ್. ಸರ್ವೇ ಕಾರ್ಯಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಬಸವನಹಳ್ಳಿ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್ ರಾಜಾರಾವ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ಅಧ್ಯಕ್ಷ ಆರ್.ಕೆ. ಚಂದ್ರು, ಐಗೂರು ಗ್ರಾಮ ಪಂಚಾಯತ್ ಸದಸ್ಯ ಕೆ.ಪಿ. ದಿನೇಶ್, ಯಡವನಾಡು ಕೂಪಾಡಿ ಹಾಡಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಜೆ.ಎಚ್.ರವಿ, ಅವರ ನೇತೃತ್ವದಲ್ಲಿ ಹಾಡಿಗಳ ನೂರಾರು ಜನಗಳ ಸಮಕ್ಷಮದಲ್ಲಿ ಸರ್ವೆ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಜಂಟಿ ಸರ್ವೇ ಕಾರ್ಯ ಪ್ರಾರಂಭವಾ ಗುವುದಕ್ಕೂ ಮೊದಲು ಅಧಿಕಾರಿಗಳು ಮತ್ತು ಹಾಡಿಯ ಮುಖಂಡರಿಗೆ ಮಾತಿನ ಚಕಮಕಿ ನಡೆಯಿತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸ್ಥಳದಲ್ಲಿ 2 ಪೊಲೀಸ್ ಮೀಸಲು ತುಕಡಿಗಳನ್ನು ಆಯೋಜಿಸಲಾಗಿತ್ತು. ಸುಂಟಿಕೊಪ್ಪಪೊಲೀಸ್ ಠಾಣಾಧಿಕಾರಿ ಅನೂಪ್‌ಮಾದಪ್ಪ ಅವರ ನೇತೃತ್ವದಲ್ಲಿ ಭಾರೀ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿ ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಶಿವಪ್ಪ, ಆರ್.ಎಪ್.ಒ ಮೊಹ್ಸಿನ್ ಪಾಷಾ, ಹುದುಗೂರು ವಲಯ ಅರಣ್ಯಾಧಿಕಾರಿ ಸತೀಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಕಂದಾಯ ಸರ್ವೆ ಅಧಿಕಾರಿ ಕಾಂತರಾಜು ಅರಣ್ಯ ಸರ್ವೆ ಅಧಿಕಾರಿ ಶೈಲೇಂದ್ರ, ಕರ್ನಾಟಕ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಜೆ.ಕೆ. ಪ್ರಕಾಶ್, ಬಿ.ಕೆ ಮೋಹನ್, ರಮೇಶ್, ರವಿ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News