×
Ad

ತವರು ತೊಟ್ಟಿಲಿನಿಂದ ತಾಯಿ ಮಡಿಲು ಸೇರಿದ ಕಂದಮ್ಮ

Update: 2016-06-18 18:17 IST

ಹಾಸನ, ಜೂ.18: ಹಲವು ದಿನಗಳಿಂದ ವಿವಾದಕ್ಕೆ ಕಾರಣವಾಗಿದ್ದ ಮಗು ಮತ್ತೆ ತಾಯಿ ಮಡಿಲಿಗೆ ಸೇರಿಸುವ ಮೂಲಕ ತವರು ಚಾರಿಟೇಬಲ್ ವಿವಾದ ಸದ್ಯಕ್ಕೆ ಅಂತ್ಯ ಕಂಡಂತಾಗಿದೆ.

       ನಗರದ ಪಾರ್ಕ್ ರಸ್ತೆಯಲ್ಲಿರುವ ಬಾಲಮಂದಿರದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶನದ ಪ್ರಕಾರ ಶನಿವಾರ ಸಹಿ ಹಾಕಿಸಿಕೊಂಡು ನಿಯಮನುಸಾರ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಡಾ॥ಹೆಚ್.ಕೆ. ಪಾಲಾಕ್ಷ ಅವರು ಮಗುವನ್ನು ತಾಯಿ ಶ್ವೇತಾ ಎಂಬವರಿಗೆ ಒಪ್ಪಿಸುವ ಮೂಲಕ ವಿವಾದಕ್ಕೆ ತೆರೆಕಂಡಂತಾಗಿದೆ. ಮಗುವನ್ನು ಬಲವಂತವಾಗಿ ಪಡೆಯಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ ಹಿನ್ನಲೆಯಲ್ಲಿ ವಿಚಾರಣೆ ನಡೆಯುತ್ತಿತ್ತು.ಎರಡು ತಿಂಗಳ ನಂತರ ಮಗುವನ್ನು ಪೊಲೀಸ್ ರಕ್ಷಣೆಯಲ್ಲಿ ವಾಪಸ್ ನೀಡಲಾಗಿದೆ.

ಡಾ॥ಹೆಚ್.ಕೆ. ಪಾಲಾಕ್ಷ

      ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಡಾ॥ಹೆಚ್.ಕೆ. ಪಾಲಾಕ್ಷ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ನಮ್ಮ ಟ್ರಸ್ಟ್‌ಗೆ ಮಗುವನ್ನು ನೀಡಿ, ನಂತರ ಮತ್ತೆ ಬೇಕು ಎಂದು ಕೇಳಿದ್ದರು. ನೇರವಾಗಿ ನಮ್ಮ ಬಳಿ ಬರದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಳೆದ ಎರಡು ತಿಂಗಳಿನಿಂದ ನಾವೇ ಪೋಷಣೆ ಮಾಡಿದ್ದು, ಈ ವಿಚಾರವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆಯಲಾಗಿತ್ತು. ಮುಂದಿನ ಆದೇಶ ಬರುವವರೆಗೂ ಮಗುವನ್ನು ಪಾಲನೆ ಮಾಡಲು ಹೇಳಲಾಗಿತ್ತು. ಈಗ ಮಗುವನ್ನು ತಾಯಿಗೆ ಮರುಳಿಸಲಾಗಿದೆ ಎಂದರು.

ಶ್ವೇತಾ:

      ಮಗುವನ್ನು ಬಲವಂತವಾಗಿ ಪಡೆಯಲಾಗಿದೆ ಎಂದು ದೂರಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದ ಮಗುವಿನ ತಾಯಿ ತಾಲ್ಲೂಕಿನ ಮಸಳೆಹೊಸಳ್ಳಿ ಗ್ರಾಂ ಬಳಿ ಇರುವ ಮತ್ತತ್ತಿ ಗ್ರಾಮದ ಶ್ವೇತಾ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ನನ್ನ ಮಗು ಬೇಕು. ಬೇಡ ಎಂದು ಹೇಳಿಲ್ಲ. ಆದರೇ ನನಗೆ ತಿಳಿಯದಂತೆ ಕೆಲವರು ಸೇರಿ ನನ್ನನ್ನು ಚನ್ನರಾಯಪಟ್ಟಣದ ಒಂದರಲ್ಲಿ ಇರಿಸಿದ್ದರು.

ಸೇವಾ ಸಮಸ್ಥೆಯ ಗೀತಾ ಎಂಬುವರು ಮಗುವನ್ನು ಬಿಟ್ಟು ಬಿಡಿ 40 ಸಾವಿರ ರೂ ಹಣ ನೀಡುವುದಾಗಿ ಹೇಳಿದ್ದರು. ನನಗೆ ಮೊದಲೆ ಒಂದು ಗಂಡು ಮಗು ಇದ್ದು, ಅವನಿಗೆ 4 ವರ್ಷಗಳು ತುಂಬಿದೆ. ನನ್ನ ಗಂಡ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಅಪಘಾತದಲ್ಲಿ ಸಾವನಪ್ಪಿದ್ದು, ನಂತರ ಮತ್ತೋರ್ವ ಲಾರಿ ಚಾಲಕನ್ನು ಮದುವೆಯಾದೆ. ಬಾಲ ಮಂದಿರ ಸಂಸ್ಥೆಯ ದೇವರಾಜ್ ಎಂಬುವರು ನನಗೆ 12 ಸಾವಿರ ಹಣ ನೀಡಬೇಕಾಗಿದ್ದು, ಇದುವರೆಗೂ ಕೇವಲ 3 ಸಾವಿರ ರೂಗಳನ್ನು ನೀಡಿ ಉಳಿದ 8 ಸಾವಿರ ರೂ ಹಣ ಕೊಡದೆ ಸತಾಯಿಸುತ್ತಿದ್ದಾರೆ ಹೇಳಿದರು.

       ಒಟ್ಟಾರೆ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ವಿವಾದ ಮಗುವನ್ನು ತಾಯಿಗೆ ಒಪ್ಪಿಸುವ ಮೂಲಕ ಸದ್ಯಕ್ಕೆ ತೆರೆ ಕಂಡರು, ಶ್ವೇತಾ ನೀಡಿರುವ ದೂರು ಪೊಲೀಸ್ ಠಾಣೆಯಲ್ಲಿ ಇನ್ನು ತನಿಖೆಯಲ್ಲಿದ್ದು, ಸತ್ಯಾಂಶ ಹೊರ ಬಂದ ಮೇಲೆ ಡಾ॥ಹೆಚ್.ಕೆ. ಪಾಲಾಕ್ಷ ಆರೋಪಿಯೇ ಇಲ್ಲವೇ ನಿರಪರಾಧಿಯೇ ಎಂಬುದು ನಿರ್ಧಾರವಾಗಲಿದೆ.

      ಈ ವೇಳೆ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಯವರು ಸ್ಥಳದಲ್ಲಿದ್ದು,ಟ್ರಸ್ಟ್‌ನ ಶೇಷಮ್ಮ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News