ನಾಳೆೆಯಿಂದ ಬಯೋಮೆಟ್ರಿಕ್ ಕ್ಯಾಂಪ್
Update: 2016-06-18 23:24 IST
ಕಾರವಾರ, ಜೂ.18: ಕರಾವಳಿ ಮೀನುಗಾರರಿಗೆ ಗುರುತಿನ ಚೀಟಿ ನೀಡುವ ಸಂಬಂಧ ಬಯೋಮೆಟ್ರಿಕ್ ಕ್ಯಾಂಪ್‌ನ್ನು ಜೂ.20ರಿಂದ 30 ರವರೆಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ನಡೆಸಲಾಗುವುದು.
ಸಮುದ್ರದಲ್ಲಿ ತೆರಳುವ ಎಲ್ಲ ಮೀನುಗಾರರು ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್/ ದೂರವಾಣಿ ಸಂಖ್ಯೆ, ರೇಷನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಮೀನುಗಾರಿಕೆ ಸಹಕಾರಿ ಸಂಘದ ಸದಸ್ಯತ್ವದ ಸಂಖ್ಯೆಯನ್ನು ತರಬೇಕು. ಹೊರ ರಾಜ್ಯದ ಮೀನುಗಾರರು ಆಧಾರ್ ಕಾರ್ಡ್ ಮತ್ತು ಅವರು ಕೆಲಸ ಮಾಡುತ್ತಿರುವ ದೋಣಿ ಮಾಲಕರ ದೃಢೀಕರಣ ಪ್ರಮಾಣ ಪತ್ರದೊಂದಿಗೆ ನೋಂದಣಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಮೀನುಗಾರಿಕೆ ಸಹಾಯಕ ನಿರ್ದೇಶಕರ(ದರ್ಜೆ 2) ಕಚೇರಿ ಕಾರವಾರ, ಬೇಲೆಕೇರಿ ಬಂದರು ಅಂಕೋಲಾ, ತದಡಿ ಬಂದರು ಕುಮಟಾ, ಕಾಸರಕೋಡ ಬಂದರು ಹೊನ್ನಾವರ ಹಾಗೂ ಮಾವಿನಕುರ್ವೆ ಬಂದರು ಭಟ್ಕಳದಲ್ಲಿ ಬಯೋಮೆಟ್ರಿಕ್ ಕ್ಯಾಂಪ್ ನಡೆಯಲಿದೆ ಎಂದು ಕಾರವಾರ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.