×
Ad

ರಸ್ತೆ ನಿರ್ಮಾಣದಲ್ಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ತರ: ರವೀಂದ್ರ ಕಿಣಿ

Update: 2016-06-18 23:30 IST

ಚಿಕ್ಕಮಗಳೂರು, ಜೂ.18: ರಸ್ತೆಗಳ ನಿರ್ಮಾಣ ಹಂತದಲ್ಲಿ ರೋಲಿಂಗ್ ಮೂಲಕ ಶೋಲ್ಡರ್‌ಗಳನ್ನು ಗಟ್ಟಿಗೊಳಿಸಿದರೆ ಸದೃಢವಾದ ರಸ್ತೆ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಮಂಗಳೂರು ಜಿಲ್ಲಾ ಪಂಚಾಯತ್ ಕಾರ್ಯಪಾಲಕ ಇಂಜಿನಿಯರ್ ರವೀಂದ್ರ ಕಿಣಿ ಸಲಹೆ ನೀಡಿದ್ದಾರೆ.

ಅವರು ನಗರ ಹೊರವಲಯದ ಶ್ರೀ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲ ಯದ ಸಭಾಂಗಣದಲ್ಲಿ ಪಿಎಂಜಿಎಸ್‌ವೈ ಯೋಜನಾ ವಿಭಾಗ ಹಾಗೂ ಕೆಆರ್‌ಆರ್‌ಡಿಎ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ರಸ್ತೆಗಳ ನಿರ್ವಹಣೆ ಕುರಿತ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು. ಗ್ರಾಮೀಣ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಸಂದರ್ಭದಲ್ಲಿ ಇಂಜಿನಿಯರ್‌ಗಳ ಪಾತ್ರ ಅತಿ ಪ್ರಮುಖವಾಗುತ್ತದೆ. ಯಾವುದೇ ರಸ್ತೆ ನಿರ್ಮಾಣವಾಗಿ ಒಂದು ವರ್ಷದ ನಂತರ ಅದರ ಗುಣಮಟ್ಟ ಪರಿಶೀಲಿಸಿದಾಗ ಸಂಪೂರ್ಣ ಮಾಹಿತಿ ಸಿಗುತ್ತದೆ. ರಸ್ತೆ ನಿರ್ಮಾಣವಾಗಿ ಒಂದು ಮಳೆಗಾಲದ ನಂತರ ಚರಂಡಿ ಹಾಗೂ ಶೋಲ್ಡರ್ ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆಗ ರಸ್ತೆಗಳು ಹೆಚ್ಚುಬಾಳಿಕೆ ಬರುತ್ತದೆ ಎಂದರು.

ಪಿಎಂಜಿಎಸ್‌ವೈ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಮಾತನಾಡಿ, ಕಾಲಕಾಲಕ್ಕೆ, ಪ್ರತಿವರ್ಷ ಹಾಗೂ ಮಳೆಗಾಲದ ಸಂದರ್ಭ ಲ್ಯಾಂಡ್‌ಸ್ಲೈಡ್ ಹಾಗೂ ತುರ್ತು ನಿರ್ವಹಣೆ ಹೀಗೆ ರಸ್ತೆ ನಿರ್ವಹಣೆಯಲ್ಲಿ ಮೂರು ವಿಧಾನವಿದೆ. ಈ ಬಗ್ಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಮನವರಿಕೆ ಮಾಡಲು ಸಹಕಾರಿಯಾಗಿದೆ. ಕೋಲ್ಡ್‌ಮಿಕ್ಸ್ ಟೆಕ್ನಾಲಜಿಯಿಂದ ಗ್ರಾಮೀಣ ರಸ್ತೆಗಳನ್ನು ನಿರ್ಮಾಣ ಮಾಡುವುದರಿಂದ ಏನು ಉಪಯೋಗ ಎಂಬುದರ ಬಗ್ಗೆ ಹಾಗೂ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಕುರಿತಂತೆ ಜಿಲ್ಲೆಯ ಕಾರ್ಯಪಾಲಕ ಇಂಜಿನಿಯರ್ ರಿಂದ ಗುತ್ತಿಗೆದಾರರಿಗೆ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಕೆಲವು ಕೆಂಪೆನಿಗಳಲ್ಲಿ ತಾಂತ್ರಿಕತೆಯಲ್ಲಿ ನೈಪುಣ್ಯತೆ ಹೊಂದಿರುವ ಮುಖ್ಯಸ್ಥರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಎಐಟಿ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ, ಸಿವಿಲ್ ಇಂಜಿನಿಯರಿಂಗ್ ಮುಖ್ಯಸ್ಥ ರಾಮೇಗೌಡ, ಉಡುಪಿ ವಿಭಾಗದ ಪ್ರಭಾರ ಕಾರ್ಯಪಾಲಕ ಅಭಿಯಂತರ ಎಚ್.ಎಂ.ಶಿವಪ್ರಕಾಶ್ ಉಪಸ್ಥತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News