ಅಂಬೇಡ್ಕರ್ ಭವನ ನಿರ್ಮಾಣಕ್ಕೆ 4 ಕೋಟಿ ರೂ.ಅನುದಾನ ಬಿಡುಗಡೆ: ಶಾಸಕ ಬಿ.ಬಿ ನಿಂಗಯ್ಯ
ಮೂಡಿಗೆರೆ, ಜೂ.18: ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ನಿರ್ಮಿಸಲು ಸರಕಾರದಿಂದ 4 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಶಾಸಕ ಬಿ.ಬಿ ನಿಂಗಯ್ಯ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಸಬಾ ಹೋಬಳಿಯಲ್ಲಿ ಬೃಹತ್ ಭವನ ನಿರ್ಮಿಸಲು ಈಗಾಗಲೇ 5 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಗೋಣಿಬೀಡು, ಬಣಕಲ್, ಆವತಿ ಹೋಬಳಿಗಳಲ್ಲಿ ಸ್ಥಳ ಗುರುತಿಸಲಾಗಿದೆ. ಆಲ್ದೂರು ವಸ್ತಾರೆ, ಅಂಬಳೆ ಹೋಬಳಿಯಲ್ಲಿ ಇನ್ನಷ್ಟೇ ಜಾಗ ಗುರುತಿಸಬೇಕಾಗಿದೆ. ಒಟ್ಟು ಏಳು ಕಡೆ ಏಕ ಕಾಲದಲ್ಲಿ ಭವನ ನಿರ್ಮಾಣ ಪ್ರಾರಂಭವಾಗಲಿದೆ. ಇದಕ್ಕೆ ಪ್ರಾಥಮಿಕವಾಗಿ ತಲಾ 50 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿರುವುದಾಗಿ ತಿಳಿಸಿದರು.
ಚಿನ್ನಿಗಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವಜನಿಕರಿಂದ ಬೇಡಿಕೆಯಿದ್ದ ವಾಣಿಜ್ಯ ಬೋಧನಾ ವಿಭಾಗವನ್ನು ಸರಕಾರ ಪ್ರಾರಂಭಿಸಿದೆ ಎಂದ ಅವರು, ಪಟ್ಟಣದಲ್ಲಿ 1.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಹಾಗೂ ಬಸ್ ಡಿಪೋದ ಆವರಣದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣವಾಗಿದ್ದು, ಇವುಗಳನ್ನು ಸದ್ಯದಲ್ಲಿ ಸಾರಿಗೆ ಸಚಿವರು ಉದ್ಘಾಟಿಸಲಿದ್ದಾರೆ.ಇದಕ್ಕೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.
ಮೂಡಿಗೆರೆ ಬಸ್ ಡಿಪೋಗೆ 20 ಹೊಸ ಬಸ್‌ಗಳನ್ನು ಒದಗಿಸಲು ಸರಕಾರದೊಂದಿಗೆ ಮಾತುಕತೆ ನಡೆಸಿದ್ದು, ಅದರಂತೆ 20 ನೂತನ ಬಸ್‌ಗಳು ಸದ್ಯದಲ್ಲಿ ಬರಲಿದೆ ಎಂದ ಅವರು, ಕಳಸಕ್ಕೆ ನೂರು ವಿದ್ಯಾರ್ಥಿಗಳು ತಂಗುವ ಹಾಸ್ಟೆಲ್ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಕೃಷಿ, ಹೈನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಪಶುಸಂಗೋಪನೆ ಕೃಷಿ, ತೋಟಗಾರಿಕೆ ಇಲಾಖೆಗಳನ್ನು ಒಳಗೊಂಡ ಕೃಷಿ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತ ಸಂವಾದ ಹಾಗೂ ವಿಜ್ಞ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಜೂ.18ರಿಂದ 29ರವರೆಗೆ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಒಂದು ತಂಡ ಜೂ.18ರಿಂದ 23ರವರೆಗೆ ಬಣಕಲ್, ಗೋಣಿಬೀಡು, ಇನ್ನೊಂದು ತಂಡ ಜೂ.22ರಿಂದ 29ರವರೆಗೆ ಕಸಬಾ, ಜಾವಳಿ, ಕಳಸ ಹೋಬಳಿಗಳಲ್ಲಿ ರೈತ ಸಂವಾದ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಮಲೇರಿಯಾ, ಡೆಂಗ್ ಮನುಷ್ಯ