×
Ad

‘ಹುಟ್ಟುಹಬ್ಬದಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕಾಗಿದೆ: ಪಿ.ಸಿ.ರಾಜೇಗೌಡ

Update: 2016-06-18 23:37 IST

ಚಿಕ್ಕಮಗಳೂರು, ಜೂ.18: ಹುಟ್ಟುಹಬ್ಬಗಳ ದಿನದಂದು ದುಂದು ವೆಚ್ಚ ಮಾಡಿ ಆಡಂಬರದ ಆಚರಣೆ ಮಾಡುವುದಕ್ಕಿಂತ ಬಡವರ ಸೇವೆ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದ್ದಾರೆ.

ಅವರು ನಗರದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ 250ಕ್ಕೂ ಹೆಚ್ಚು ರೋಗಿಗಳಿಗೆ ಜಿಲ್ಲಾ ಘಟಕದಿಂದ ಬ್ರೆಡ್ ವಿತರಿಸಿ ಬಳಿಕ ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ರೋಗಿಗಳು ಸರಕಾರಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆಗೆ ಔಷಧದ ಕೊರತೆ ಕಾಣುತ್ತದೆ. ಇಂತಹ ಪರಿಸ್ಥ್ಥಿತಿಯಲ್ಲಿ ಸಂಘ ಸಂಸ್ಥೆಗಳು ಕೈಲಾದ ಮಟ್ಟಿಗೆ ಸಹಕಾರ ನೀಡಿ ಮಾನವೀಯತೆ ಮೆರೆಯುವುದು ಮುಖ್ಯ. ಹಾಗಾಗಿ ಸಂಘಟನೆ ರಾಜ್ಯಾಧ್ಯಕ್ಷ ಕುಮಾರ್‌ರವರ ಹುಟ್ಟು ಹಬ್ಬದಂದು ಬ್ರೆಡ್ ವಿತರಿಸಲಾಗಿದೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಿ ಮಾತನಾಡಿ, ಕುಮಾರ್ ರವರ ಹುಟ್ಟುಹಬ್ಬಕ್ಕೆ ಜಿಲ್ಲಾ ಕನ್ನಡಸೇನೆ 250ಕ್ಕೂ ಹೆಚ್ಚು ರೋಗಿಗಳಿಗೆ ಬ್ರೆಡ್ ವಿತರಿಸಿ, ಸಾಂತ್ವನ ಹೇಳುತ್ತಿರುವುದು ಸಂಘಟನೆಯ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ. ಸಂಘಟಕರು ಹೇಳಿದಂತೆ ಬಡವರಿಗೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸುವುದು ಮತ್ತು ಅಗತ್ಯ ಔಷಧಗಳನ್ನು ಪೂರೈಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಮುಖಂಡರಾದ ದೇವರಾಜ್, ಕುಪ್ಪೇನಹಳ್ಳಿ ರಾಜು, ನೀಲೇಶ್, ಹೇಮಂತ್, ಜಯಪ್ರಕಾಶ್, ಯೋಗೀಶ್, ತಿಮ್ಮಪ್ಪ, ನವೀನ್, ಲೋಕೇಶ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News