ರಿಕ್ಷಾ ಡ್ರೈವರ್, ಟ್ರಾಫಿಕ್ ವಾರ್ಡನ್ ನಿಂದ ಹೊಂಡಮುಕ್ತವಾಯಿತು ರಸ್ತೆ !
Update: 2016-06-19 19:37 IST
ಮಂಗಳೂರು,ಜೂ.19:ನಗರದ ಕಂಕನಾಡಿಯ ಕರಾವಳಿ ಜಂಕ್ಷನ್‌ನಲ್ಲಿ ಮಳೆಯಿಂದ ಉಂಟಾದ ರಸ್ತೆಯಲ್ಲಿನ ಹೊಂಡವನ್ನು ರಿಕ್ಷಾ ಚಾಲಕ ಬೂಬ, ಟ್ರಾಫಿಕ್ ವಾರ್ಡನ್ ರೇಖಾ ಮತ್ತು ಪಾದಚಾರಿ ಪ್ರದೀಪ್ ಎಂಬವರು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಬೂಬ ಅವರು ಕಳೆದ ವಾರದಲ್ಲಿ ಬೆಂದೂರ್‌ವೆಲ್ ಬಳಿಯ ಹೊಂಡವನ್ನು ತಮ್ಮ ಸ್ವಂತ ಖರ್ಚಿನಿಂದ ಮುಚ್ಚಿ ಸರಿಪಡಿಸಿದ್ದರು. ಇಂದು ಅವರು ಎಸ್‌ಸಿಎಸ್ ಬಳಿಯಿಂದ ರಿಕ್ಷಾ ಮತ್ತು ಟೆಂಪೋದಲ್ಲಿ ಡಾಮಾರು ತುಂಡುಗಳನ್ನು ತಮ್ಮ ಸ್ವಂತ ಖರ್ಚಿನಿಂದ ತಂದು ಹೊಂಡಗಳಿಗೆ ಹಾಕಿ ಅದನ್ನು ಸರಿಪಡಿಸಿದರು.
ಫೋಟೊ : ಫಾರೂಕ್ ಅಬ್ದುಲ್ಲ ಕೊಪ್ಪ