×
Ad

ಕುಶಾಲನಗರ: ಮುಂಗಾರು ಕವಿಗೋಷ್ಠಿ

Update: 2016-06-19 23:24 IST

ಕುಶಾಲನಗರ, ಜೂನ್. 19: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ಹೋಬಳಿ ಘಟಕ ಮತ್ತು ಅರಣ್ಯ ಇಲಾಖೆ ಕುಶಾಲನಗರ ಇವರ ಸಹಭಾಗಿತ್ವದಲ್ಲಿ ಇಲ್ಲಿನ ಕಾವೇರಿ ನಿಸರ್ಗಧಾಮದ ಕಾವೇರಿ ಮಡಿಲಲ್ಲಿ ಮುಂಗಾರು ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ವಹಿಸಿದ್ದರು. ಜ್ಯೋತಿ ಬೆಳಗಿಸುವ ಮೂಲಕ ಉಪನ್ಯಾಸಕಿ, ಸಾಹಿತಿ ಶ.ಗ. ನಯನತಾರಾ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷ ಲೋಕೇಶ್ ಸಾಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಜಿಲ್ಲಾ ಘಟಕದ ಕಸಾಪದ ನಿರ್ದೇಶಕ ಅಶ್ವಥ್, ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ದಿನೇಶಾಚಾರಿ. ನಿರ್ದೇಶಕ ಎಚ್. ಬಿ. ಹಂಡ್ರಂಗಿ ನಾಗರಾಜ್, ನಿರ್ದೇಶಕ ಕುಮಾರ್, ಎಚ್.ಎಂ. ವೆಂಕಟೇಶ್, ಖಜಾಂಚಿ ಚಂದ್ರಶೇಖರ್ ಮತ್ತು ಕವಿಗೋಷ್ಠಿಯ ವಿಶೇಷ ಆಹ್ವಾನಿತರಾಗಿ ಮನೆ, ಮನೆ ಕವಿಗೋಷ್ಠಿಯ ಬಳಗದ ಸಂಸ್ಥಾಪಕ ಕಂಪ್ಲಾಪುರ ಮೋಹನ್ ಭಾಗವಹಿಸಿದ್ದರು. ಇದೇ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೀಗ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿ ಹೊಂದಿದ ಎಂ.ಎಸ್. ಚಿಣ್ಣಪ್ಪನವರನ್ನು ಶಾಲು ಹೊದಿಸಿ ಫಲ, ತಾಂಬೂಲ ನೀಡಿ ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಲಾಯಿತು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕೂಡಿಗೆಯ ಉಪನ್ಯಾಸಕ ಮತ್ತು ಸಾಹಿತಿ ಡಾ. ಪ್ರಕಾಶ್‌ರವರು ವಹಿಸಿದ್ದರು. 30ಕ್ಕೂ ಅಧಿಕ ಮಂದಿ ಜಿಲ್ಲೆಯ ಕವಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News