×
Ad

ಕುಶಾಲನಗರ: ತೂಗು ಸೇತುವೆ ನಿರ್ಮಾಣ ನನೆಗುದಿಗೆ

Update: 2016-06-19 23:26 IST

ಕುಶಾಲನಗರ, ಜೂನ್. 19: ಮೈಸೂರು ಜಿಲ್ಲೆಯ ಗಡಿಭಾಗದಿಂದ ಕೊಡಗಿನ ಕುಶಾಲನಗರದ ಸಮೀಪದ ಕೈಗಾರಿಕಾ ಬಡಾವಣೆಗೆ ಕೆಲಸಕ್ಕಾಗಿ ಬರುವ ಕಾರ್ಮಿಕರಿಗೆ ಮತ್ತು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿನ ಕೂಡುಮಂಗಳೂರು ಪಂಚಾಯತ್ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆಯಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದಿಂಡುಗಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ ಕಾಮಗಾರಿಯು ನನೆಗುದಿಗೆ ಬಿದ್ದಿದೆ. ಜನ ಸಾಮಾನ್ಯರ ದಿನನಿತ್ಯದ ಆಗುಹೋಗುಗಳ ಸೌಕರ್ಯಕ್ಕಾಗಿ ಕಳೆದ ಬಾರಿ ಸಂಸದರ ಚುನಾವಣೆಯ ಸಂದರ್ಭ ತೂಗು ಸೇತುವೆಯ ಕಾಮಗಾರಿಗಾಗಿ ಶಿಲಾನ್ಯಾಸವನ್ನು ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ನೆರವೇರಿಸಿದ್ದು, ಇಂದು ಅದು ಮರೀಚಿಕೆಯಾಗಿಯೇ ಉಳಿದಿದೆ. ಕೇವಲ ಕಾಲ್ನಡಿಗೆಯಲ್ಲಿ ಹೊಳೆ ದಾಟಿ ಬರಬಹುದಾದ ಮಾರ್ಗವಿಲ್ಲದೆ ಸಾರ್ವಜನಿಕರು ಮತ್ತು ಮಕ್ಕಳು ಸುಮಾರು 10ರಿಂದ 15 ಕಿ.ಮೀ. ದೂರ ಸುತ್ತಿ ಬಳಸಿ ಬರುವ ಪರಿಸ್ಥಿತಿ ಎದುರಾಗಿದೆ. ಆದರೆ ಮಳೆಗಾಲದಲ್ಲಿ ವರುಣನ ಆರ್ಭಟದೊಂದಿಗೆ ತುಂಬಿ ಹರಿಯುವ ಕಾವೇರಿ ನದಿಯನ್ನು ದಾಟಿ ಬರುವುದು ಸಾಹಸದ ಕೆಲಸವೇ ಸರಿ. ಒಂದು ವೇಳೆ ಸಾಧ್ಯವಾದರೂ ಪ್ರಾಣಕ್ಕೆ ಸಂಚಕಾರವಾಗುವುದು ಖಂಡಿತ. ಇದನ್ನು ಮನಗಂಡ ನಮ್ಮ ಸರಕಾರದ ಜನ ಪ್ರತಿನಿಧಿಗಳು 2015ರ ಚುನಾವಣೆಯ ಸಂದರ್ಭ, ನದಿ ದಾಟಲು ಜನ ಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ ಆಯ್ಕೆ ಮಾಡಿ ಕೈಗಾರಿಕಾ ಬಡಾವಣೆಯ ಕಾವೇರಿ ನದಿ ಅಂಚಿನ ಎರಡು ಬದಿಯ ಸ್ಥಳವನ್ನು ಆಯ್ಕೆ ಮಾಡಿ ತೂಗು ಸೇತುವೆ ನಿರ್ಮಿಸಲು ಅಂದಾಜು ವೆಚ್ಚ ಸುಮಾರು 90 ಲಕ್ಷ ರೂ. ಅಂದಿನ ಘನ ಸರಕಾರದ ಇಂಧನ ಸಚಿವ, ಹಾಲಿ ಸಂಸದ ವೀರಪ್ಪ ಮೊಯ್ಲಿಯವರು ಕೇಂದ್ರದಿಂದ ಮಂಜೂರು ಮಾಡಿಸುವುದಾಗಿ ಹೇಳಿದ್ದರು. ಇವರ ಆದೇಶದಂತೆ ಅಂದಿನ ಸಂಸದರಾದ ಎಚ್, ವಿಶ್ವನಾಥ್, ಬಿ.ಟಿ.ಪ್ರದೀಪ್ ಕುಮಾರ್, ಕೆ.ಎಂ. ಲೋಕೇಶ್ ಮತ್ತು ಕೆ.ಪಿ. ಚಂದ್ರಕಲಾಪ್ರಸನ್ನ, ಜೋಸೆಫ್ ವಿಕ್ಟರ್ ಸೋನ್ಸ್ ಮತ್ತು ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್ ಭಾಗವಹಿಸಿ ಶಿಲಾನ್ಯಾಸ ನೆರವೇರಿಸಿದ್ದರು. ಅದರಂತೆ ತೂಗು ಸೇತುವೆಗಾಗಿ ಮಂಜೂರಾದ ಜಾಗ ಇಂದು ಕಸ ಸುರಿಯುವ ಜಾಗವಾಗಿ ಮಾರ್ಪಟ್ಟಿದ್ದು ಕಸದ ಕೊಂಪೆಯಾಗಿದೆ. ಜನರ ಒಳಿತಿಗಾಗಿ ಮಾಡಿದ ಯೋಜನೆ ಇಂದು ಮಣ್ಣು ಪಾಲಾಗಿದೆ. ಕೂಡುಮಂಗಳೂರು ಗ್ರಾಪಂ ಅಧ್ಯಕ್ಷರು ಸದಸ್ಯರು ಮತ್ತು ಪೌರ ಕಾರ್ಮಿಕರು ಈ ಜಾಗವನ್ನು ವೀಕ್ಷಿಸಿ ಹೋಗುತ್ತಾರೆಯೇ ಹೊರತು, ಸ್ವಚ್ಛತೆಯ ಬಗ್ಗೆ ಗಮನ ಹರಿಸಿಲ್ಲ ಅಂದು ಅದರಂತೆ ಹಣ ಮಂಜೂರು ಸಹ ಆಗಿದ್ದು ಇದುವರೆಗೂ ಅಧಿಕಾರಿ ವರ್ಗದವರು ಟೆಂಡರ್ ಕರೆಯದೆ ಮರೀಚಿಕೆಯಾಗಿದೆ ಇನ್ನಾದರೂ ತಾಲೂಕಿನ ಶಾಸಕರು, ಸಂಸದರು ಮತ್ತು ಕೊಡಗು ಜಿಪಂನ ಜನಪ್ರತಿನಿಧಿಗಳು ಗಮನ ಹರಿಸಿ ಜಾಗದಲ್ಲಿರುವ ಕಸವನ್ನು ಹರಿಯುವ ಕಾವೇರಿ ನದಿಗೆ ಸೇರದಂತೆ ತಡೆಗಟ್ಟಿ, ಸಾಮಾನ್ಯ ಜನರ ಬೇಡಿಕೆಯನ್ನು ಈಡೇರಿಸಲು ಮುಂದಾಗುವರೇ.? ‘ಮಾದಿಗ ಸಮುದಾಯ ಬದಲಾವಣೆಯಲ್ಲಿ ಅಂಬೇಡ್ಕರ್ ಪಾತ್ರ ಮಹತ್ತರ’ ಮಾದಿಗರ ನಡೆ ಪರಿವರ್ತನೆ ಕಡೆ ದಾವಣಗೆರೆ, ಜೂ.19: ಮಾದಿಗ ಸಮುದಾಯ ಬದಲಾವಣೆಯಾಗಬೇಕಾದರೆ ಅಕ್ಷರವೆಂಬ ಪ್ರತಿಸ್ಪರ್ಧೆ ಹಾಗೂ ಅಂಬೇಡ್ಕರ್ ಆದರ್ಶ, ತತ್ವ ಗಳು, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರು ಬೆಳೆಸಿಕೊಂಡಾಗ ಮಾತ್ರ ಸಾಧ್ಯ ಎಂದು ಕರ್ನಾಟಕ ಮಾದಿಗ ಯುವ ಸೇನೆಯ ಮುಖಂಡ ಬಿ.ಎಲ್. ರಾಜು ಹೇಳಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ರವಿವಾರ ಕರ್ನಾಟಕ ಮಾದಿಗ ಯುವ ಸೇನೆ ವತಿಯಿಂದ ಮಾದಿಗರ ನಡೆ ಪರಿವರ್ತನೆ ಕಡೆ ಹಾಗೂ ಗೌತಮ ಬುದ್ಧ, ಬಸಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಮ್,ಪ್ರೊ.ಬಿ. ಕೃಷ್ಣಪ್ಪನವರ ಜನ್ಮ ದಿನಾಚರಣೆಯ ಪೂರ್ವಭಾವಿ ಸಮ್ಮಿಲನ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಎಲ್ಲ ಜಾತಿಗಳು ರಾಜ್ಯಾದ್ಯಂತ ಸಂಘಟಿತರಾಗಿದ್ದು, ಆ ಸಂಘಟನೆಯ ಮೂಲಕ ಒಡೆದು ಹೋಗುವ ಸ್ಥಿತಿಯಲ್ಲಿ ನಾವುಗಳು ಸಂಘಟನೆ ಕಟ್ಟುವ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಎಷ್ಟರ ಮಟ್ಟಿಗೆ ಹಿಂದುಳಿದಿದ್ದೇವೆ ಎಂಬುದನ್ನು ಅವಲೋಕಿಸಿಕೊಳ್ಳಬೇಕಾಗುತ್ತದೆ ಎಂದರು. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಮಾದಿಗರ ಸ್ಥಿತಿಗತಿ ತಿಳಿಯಬೇಕಾಗಿದೆ. ಏಕೆಂದರೆ ರಾಜಕೀಯ ಮೀಸಲಾತಿ ಕ್ಷೇತ್ರದ ಆಯ್ಕೆಯಾದ ಅಭ್ಯರ್ಥಿಗಳು ದಲಿತ ಆಶೋದ್ಧಾರಕ್ಕೆ ಶ್ರಮಿಸದೆ ಮೇಲ್ಜಾತಿ ವರ್ಗದ ಪರ ಕೆಲಸ ಮಾಡಲಾಗುತ್ತಿದೆ. ರಾಜಕೀಯದಲ್ಲಿ ವೈಯಕ್ತಿಯ ವಿಷಯಕ್ಕೆ ಮಾತ್ರ ಹೊಂದಾಣಿಕೆ ನಡೆಯುತ್ತಿದೆಯೇ ವಿನಃ ಸಮಾಜ ಉದ್ಧಾರಕ್ಕೆ ಅಲ್ಲ ಎಂದು ತಿಳಿಸಿದರು. ದಲಿತರ ಅನೇಕ ಜನರಲ್ಲಿ ಗೊಂದಲ ಉಂಟಾಗಿದ್ದು, ಅಂಬೇಡ್ಕರ್‌ನ್ನು ಅನುಸರಿಸಬೇಕೋ, ಬೇಡವೋ ಎನ್ನುವ ಪ್ರಶ್ನೆಗಳು ಗೋಚರಿಸುತ್ತಿವೆ. ಇನ್ನು ಅಂಬೇಡ್ಕರ್‌ರವರು ದೇಶದಲ್ಲಿ ಮೊದಲು ಪಿಎಚ್‌ಡಿ ಪಡೆದ ವ್ಯಕ್ತಿ. ಸಮಾಜದಲ್ಲಿ ಇರುವ ಪ್ರತಿಯೊಬ್ಬರು ಬದ್ಧತೆ ಮತ್ತು ಆಲೋಚನೆಗಳು ಮಾಡುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು. ಇಡೀ ಸಮಾಜವೇ ಅಸಮಾನತೆಯಲ್ಲಿ ತೊಡಗಿದ್ದಾಗ ಅಂಬೇಡ್ಕರ್ ಅವರು ದೇವಸ್ಥಾನ ಪ್ರವೇಶಕ್ಕೆ, ಕೆರೆ ನೀರು ಬಳಸುವುದಕ್ಕೆ ನಮ್ಮ ಪರವಾಗಿ ಪ್ರಶ್ನೆ ಕೇಳಿದ್ದರು. ಅದರ ಜೊತೆಗೆ ರಾಜಕೀಯ ಪ್ರಯೋಗ ಮಾಡಬೇಕು ಎಂಬ ಆಲೋಚನೆಗಳು ಅಂಬೇಡ್ಕರ್ ಅವರಿಗೆ ಬರಲಿಲ್ಲ ಎಂದು ಹೇಳಿದರು. ಅಂಬೇಡ್ಕರ್ ಜೊತೆಗೆ ದಲಿತ ಜ್ಞಾನವಂತರು ಕೈ ಜೋಡಿಸಿದ್ದರೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಕಾಣುವ ಮೂಲಕ ಪ್ರಗತಿ ಹೊಂದಬಹುದಿತ್ತು. ಆದರೆ, ಈಗ ಜಾತಿಯನ್ನೇ ಭಗ್ನಗೊಳಿಸುವ ಸ್ಥಿತಿಗೆ ಬಂದಿದೆ. ಆದ್ದರಿಂದ ಸಮಾಜದವರು ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿದುಕೊಂಡು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಭೆಯಲ್ಲಿ ವಿಜಯ್ ಬಾಬು, ಮೋಹನ್ ಕುಮಾರ್, ರಂಗಪ್ಪ, ಹುಚ್ಚಂಗಿ ಪ್ರಸಾದ್, ಲಿಂಗದಹಳ್ಳಿ ನಾಗರಾಜ್, ಸಿಂಡಿಕೇಟ್ ಬ್ಯಾಂಕ್ ಸದಸ್ಯ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News