×
Ad

ಭದ್ರಾ ಕುಡಿಯುವ ನೀರಿನ ಲಿಂಕ್ ಪೈಪ್‌ಲೈನ್‌ಗೆ ಚಾಲನೆ

Update: 2016-06-19 23:32 IST

  ಕಡೂರು, ಜೂ.19: ಟಾಸ್ಕ್‌ಫೋರ್ಸ್ ಅನುದಾನದಲ್ಲಿ ರೂ.3 ಲಕ್ಷ ವೆಚ್ಚದ ಭದ್ರಾ ಕುಡಿಯುವ ನೀರಿನ ಲಿಂಕ್ ಪೈಪ್‌ಲೈನ್ ಕಾಮಗಾರಿಗೆ ಪುರಸಭೆ ಸದಸ್ಯ ಕೆ.ಎಂ.ಸೋಮಶೇಖರ್ ಚಾಲನೆ ನೀಡಿದರು.

  ಪಟ್ಟಣದ ಶನೇಶ್ವರ ದೇವಾಲಯದ ರಸ್ತೆ ಹೊಸ ಬಡಾವಣೆಯಲ್ಲಿ ಟಾಸ್ಕ್‌ಫೋರ್ಸ್ ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದ ಭದ್ರಾ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. 2013-14ನೆ ಸಾಲಿನ ಪುರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ಕುಡಿಯುವ ನೀರು ಯೋಜನೆಗೆ ರೂ.42.48 ಲಕ್ಷ ಮಂಜೂರಾಗಿದ್ದು, ಇದರಲ್ಲಿ ವಾರ್ಡ್ ನಂ. 5ರಲ್ಲಿ 4.50 ಲಕ್ಷದಲ್ಲಿ ಲಿಂಕ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

2015-16ನೆ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಸಾಲಮ್ಮ ಕಾಲನಿಯಿಂದ ಹಳಕಟ್ಟಪ್ಪ ಬಡಾವಣೆಯ ಲಿಂಕ್ ರಸ್ತೆಗೆ ರೂ. 6.50 ಲಕ್ಷ ಬಿಡುಗಡೆಯಾಗಿದೆ. ವಾರ್ಡ್‌ನಅಭಿವೃದ್ಧ್ದಿಗೆ ರೂ. 15 ಲಕ್ಷ ವೆಚ್ಚದ ಕಾಮಗಾರಿಗಳು ಮಂಜೂರಾಗಿದ್ದು, ಇವುಗಳು ಟೆಂಡರ್ ಹಂತದಲ್ಲಿದೆ. ವಾರ್ಡ್‌ನಲ್ಲಿ ಸುಮಾರು 10 ಪಾರ್ಕ್‌ಗಳಿದ್ದು, ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

 ಭದ್ರಾ ಕುಡಿಯುವ ನೀರಿನ ಯೋಜನೆ ದಿವಂಗತ ಶಾಸಕ ಕೃಷ್ಣಮೂರ್ತಿ ಕನಸಿನ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಈಗಾಗಲೆ 15ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಭದ್ರಾ ಕುಡಿಯುವ ನೀರು ಸರಬರಾಜಾಗುತ್ತಿದೆ. ಸಧ್ಯದಲ್ಲಿಯೇ ಕ್ಷೇತ್ರದ ಶಾಸಕರು ಮತ್ತು ಪುರಸಭಾ ಸದಸ್ಯರ ನಿಯೋಗ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಶಂಕುಸ್ಥಾಪನೆಗೆ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಪುರಸಭೆ ಉಪಾಧ್ಯಕ್ಷ ಕೆ.ಎಸ್.ಮಂಜುನಾಥ್, ಮುಖ್ಯಾಧಿಕಾರಿ ಎಚ್.ಎನ್.ಮಂಜುನಾಥ್, ಗುತ್ತಿಗೆದಾರ ಕೆ.ಎಸ್.ರಮೇಶ್, ಮುಖಂಡರಾದ ರಾಜ್‌ಕುಮಾರ್, ಕಾಂತರಾಜು, ವೈ.ಎಂ.ರಮೇಶ್, ಆಶ್ರಯ ಸಮಿತಿ ಸದಸ್ಯ ಕೆ.ಜಿ. ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News