×
Ad

ನೂತನ 13 ಸಚಿವರ ಪೈಕಿ ಯಾರಿಗೆ ಯಾವ ಖಾತೆ?

Update: 2016-06-19 23:38 IST

ಬೆಂಗಳೂರು, ಜೂ. 19: ನೂತನವಾಗಿ ಸಂಪುಟಕ್ಕೆ ಸೇರ್ಪಡೆಗೊಂಡವರ ಪೈಕಿ ಐದು ಮಂದಿ ಹಿಂದುಳಿದ ವರ್ಗ, ಮೂರು ಲಿಂಗಾಯತ, ಎರಡು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ತಲಾ ಒಂದೊಂದು ಸ್ಥಾನ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ 13 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಇನ್ನಷ್ಟೇ ನಡೆಯಬೇಕಿದ್ದು, ಈಗಾಗಲೇ ಸಂಭವನೀಯ ಪಟ್ಟಿಯನ್ನು ತಯಾರಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ನಿರ್ಧಾರ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ನೂತನ ಸಚಿವರಿಗೆ ಸಂಭವನೀಯ ಖಾತೆಗಳ ವಿವರ

ಕಾಗೋಡು ತಿಮ್ಮಪ್ಪ-ಕಂದಾಯ

ಕೆ.ಆರ್.ರಮೇಶ್‌ಕುಮಾರ್-ಕೃಷಿ

ತನ್ವೀರ್ ಸೇಠ್-ವಕ್ಫ್ ಮತ್ತು ಪೌರಾಡಳಿತ

ಎಚ್.ವೈ.ಮೇಟಿ-ಜವಳಿ

ಎಂ.ಆರ್.ಸೀತಾರಾಮ್-ನಗರಾಭಿವೃದ್ಧಿ

ಬಸವರಾಜ ರಾಯರೆಡ್ಡಿ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಸಂತೋಷ್ ಲಾಡ್-ಕಾರ್ಮಿಕ ಖಾತೆ

ಎಸ್.ಎಸ್.ಮಲ್ಲಿಕಾರ್ಜುನ-ಕ್ರೀಡೆ

ರಮೇಶ್ ಜಾರಕಿಹೊಳಿ-ಅಬಕಾರಿ

ರುದ್ರಪ್ಪಲಮಾಣಿ-ತೋಟಗಾರಿಕೆ

ಈಶ್ವರ್ ಖಂಡ್ರೆ-ಸಣ್ಣ ನೀರಾವರಿ

ಪ್ರಿಯಾಂಕ್‌ ಖರ್ಗೆ-ಆಹಾರ ಮತ್ತು ನಾಗರಿಕ ಸರಬರಾಜು

 ಪ್ರಮೋದ್ ಮಧ್ವರಾಜ್-ಬಂದರು ಮತ್ತು ಮೀನುಗಾರಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News