ರೆಬೆಲ್‌ ಸ್ಟಾರ್‌ ಅಂಬರೀಶ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ

Update: 2016-06-20 08:40 GMT

ಬೆಂಗಳೂರು, ಜೂ.20: ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದನ್ನು ಪ್ರತಿಭಟಿಸಿ ಮಾಜಿ ವಸತಿ ಸಚಿವ ರೆಬೆಲ್‌ ಸ್ಟಾರ‍್ ಅಂಬರೀಶ್‌ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.

 ಆಪ್ತಕಾರ್ಯದರ್ಶಿ   ಎಸ್‌. ಶ್ರೀನಿವಾಸ್‌ ಮೂಲಕ ಕರ್ನಾಟಕ ವಿಧಾನಸಭೆ ಡೆಪ್ಯುಟಿ ಸ್ವೀಕರ್ ಎನ್.ಎಚ್. ಶಿವಶಂಕರರೆಡ್ಡಿ  ಅವರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅಂಬರೀಶ್‌ ಮಂಡ್ಯ ಕ್ಷೇತ್ರದ ಶಾಸಕ ಸ್ಥಾನಕ್ಕೆ ಒಂದೇ ವಾಕ್ಯದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ .ಆದರೆ ಅಂಬರೀಶ್‌ ರಾಜೀನಾಮೆಯನ್ನು ನಿರಾಕರಿಸಿರುವ ಡೆಪ್ಯುಟಿ ಸ್ವೀಕರ‍್ ಶಿವಶಂಕರ ರೆಡ್ಡಿ ಖುದ್ದಾಗಿ ಬಂದು ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದಾರೆ   ಎಂದು ತಿಳಿದು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News