×
Ad

ಮುಂಡಗೋಡ: ಪಾಳಾ ಗ್ರಾಮದ ಸೊಸೈಟಿಯಲ್ಲಿ ಲಕ್ಷಾಂತರ ರೂ. ಕಳ್ಳತನ

Update: 2016-06-20 20:11 IST

ಮುಂಡಗೋಡ, ಜೂ.20: ತಾಲೂಕಿನ ಪಾಳಾ ಗ್ರಾಮದ ದೊಡ್ಡ ಪ್ರಮಾಣದ ಪತ್ತಿನ ಸಹಕಾರಿ ಸಂಘದ ಮುಂಬಾಗಿಲನ್ನು ಒಡೆದು ಲಕ್ಷಾಂತರ ರೂ.ಗಳನ್ನು ಕಳವುಗೈದಿರುವ ಘಟನೆ ಸಂಭವಿಸಿದೆ.

ರವಿವಾರ ರಾತ್ರಿ ಇಲ್ಲವೆ ಸೋಮವಾರ ಬೆಳಗಿನ ಜಾವ ಕಳ್ಳತನ ನಡೆದಿರಬಹುದೆಂದು ಅಂದಾಜಿಸಲಾಗಿದೆ.

ಮುಂಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳರು ಕ್ಯಾಶ್ ಬಾಕ್ಸ್‌ಗಳನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ. ಬ್ಯಾಂಕ್‌ನ ಬಗ್ಗೆ ಮಾಹಿತಿ ಇದ್ದವರೇ ಈ ಕಳ್ಳತನ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಸಾರ್ವಜನಿಕರ ಪ್ರಕಾರ ಲಕ್ಷಾಂತರ ರೂ. ಕಳತನವಾಗಿರಬಹುದೆಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪಿಎಸ್ಸೈ ಲಕ್ಕಪ್ಪ ನಾಯಕ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚಲು ಕಾರವಾರದಿಂದ ಶ್ವಾನದಳವನ್ನು ಕರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News