×
Ad

ವೌಢ್ಯಾಚರಣೆ ನಿಲ್ಲಿಸಲು ಮುರುಘಾ ಶರಣರ ಪಾದಯಾತ್ರೆ

Update: 2016-06-20 23:06 IST

ಚಿತ್ರದುರ್ಗ ಜೂ. 20: ಮಾನವನ ಅಜ್ಞಾನ ಮತ್ತು ಅಲಕ್ಷ್ಯತನ ದಿಂದ ಅಹಿತಕರ ಘಟನೆಗಳು ನಡೆಯುತ್ತವೆ. ಅವುಗಳನ್ನು ಸರಿದಾರಿಗೆ ತರಲು ಮಾಧ್ಯಮಗಳು ನಿರಂತರವಾಗಿ ಶ್ರಮಿಸು ತ್ತಿವೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಸೋಮವಾರ ತಾಲೂಕಿನ ಪಂಡರಹಳ್ಳಿಯಲ್ಲಿ ಇತ್ತೀಚೆಗೆ ಗ್ರಾಮಸ್ಥರು ಮಳೆಗಾಗಿ ಮಗುವನ್ನು ಬೆತ್ತಲೆ ಮೆರವಣಿಗೆ ಮಾಡಿ ಮೌಢ್ಯಾಚರಣೆ ಜೀವಂತವಾಗಿರಿಸಿದ್ದ ಗ್ರಾಮಕ್ಕೆ ಭೇಟಿ ನೀಡಿ ಜನಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ಅಮಾನವೀಯ ಆಚರಣೆಗಳನ್ನು ನಡೆಸಬಾರದು ಎಂದರು.
ಮಳೆ ಬಾರದೆ ಇರುವುದು ಈ ಗ್ರಾಮಕ್ಕೆ ಮಾತ್ರವಲ್ಲ, ರಾಜ್ಯದ ಅನೇಕ ಕಡೆಗಳಲ್ಲಿ ಮಳೆಯಾಗಿಲ್ಲ. ಕೆಲವು ಕಡೆ ಕುಡಿ ಯಲು ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣ ಪ್ರಾಕೃತಿಕ ವೈಪರೀತ್ಯ ಗಳು. ಮಳೆ ಬರಿಸುವುದು ಯಾರ ಕೈಯಲ್ಲೂ ಇಲ್ಲ. ಅತಿವೃಷ್ಟಿ-ಅನಾವೃಷ್ಟಿ ಜಗದ ನಿಯಮ ಎಂದು ಹೇಳಿದರು.
ನಿಸರ್ಗಕ್ಕೆ ತನ್ನದೆ ಆದ ನಿಯಮವಿದೆ. ಆದರೆ, ನಾವು ನಿಸರ್ಗದ ಮೇಲೆ ದಾಳಿ ಮಾಡುತ್ತಿದ್ದೇವೆ. ಮನುಷ್ಯನ ಆಸೆಗೆ ಗುಡ್ಡಬೆಟ್ಟಗಳು ಬರಿದಾಗುತ್ತಿವೆ. ಗಿಡ-ಮರಗಳನ್ನು ದಿನಂಪ್ರತಿ ಕಡಿಯುತ್ತಿದ್ದಾರೆ ಇದರಿಂದ ಭೂಮಿಯ ತಾಪ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಗುಡ್ಡಬೆಟ್ಟಗಳನ್ನು ಸಂರಕ್ಷಿಸುವುದರ ಜೊತೆಗೆ ಗಿಡಮರಗಳನ್ನು ಬೆಳೆಸಬೇಕು. ಇಂತಹ ಮೌಢ್ಯ ಆಚರಣೆಗಳಿಂದ ಯಾವುದೇ ಪ್ರಯೋ ಜನವಾಗದು. ಜನರು ವೈಚಾರಿಕವಾಗಿ ಯೋಚಿಸಬೇಕು ಎಂದರು.
ವಾಲ್ಮೀಕಿ ಗುರುಪೀಠದ ಪ್ರಸನ್ನ ವಾಲ್ಮೀಕಿ ಸ್ವಾಮಿ ಮಾತನಾಡಿ, ತಾಪಮಾನ ಹೆಚ್ಚಾಗುವುದರಿಂದ ಮಳೆ ಪ್ರಮಾಣ ಕಡಿಮೆಯಾಗುತ್ತದೆ. ಅದರ ಸಮತೋಲನವನ್ನು ಕಾಪಾಡಲು ಗಿಡ-ಮರಗಳನ್ನು ಬೆಳೆಸಬೇಕು. ಪ್ರಕೃತಿ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು. ಇಲ್ಲದೆ ಹೋದರೆ ಅಂತರ್ಜಲ ಮಟ್ಟ ಇನ್ನೂ ಕುಸಿಯುತ್ತದೆ ಎಂದರು.
ಇದೇ ವೇಳೆ ಮುರುಘಾ ಶರಣರು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಊರಿನ ವಿದ್ಯಾವಂತರು ಹಾಗೂ ಯುವ ಕರಿಂದ ಮೌಢ್ಯಾಚರಣೆ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿಸಿದರು. ವಿವಿಧ ಘೋಷಣೆಗಳ ಮೂಲಕ ಪಾದ ಯಾತ್ರೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News