×
Ad

ಡೆಂಟಲ್ ಪರೀಕ್ಷೆ ಬರೆಯಲು ತಾತ್ಕಾಲಿಕ ಅವಕಾಶ ಕಲ್ಪಿಸಿದ ಹೈಕೋರ್ಟ್

Update: 2016-06-20 23:13 IST

ಬೆಂಗಳೂರು, ಜೂ.20: ಸಿಇಟಿ ಬರೆಯದ 23 ವಿದ್ಯಾರ್ಥಿಗಳಿಗೆ ವಿ.ಎಸ್.ಡೆಂಟಲ್ ಕಾಲೇಜು ಪ್ರವೇಶ ನೀಡಿರುವುದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್, ಒಕ್ಕಲಿಗರ ಸಂಘಕ್ಕೆ 50 ಲಕ್ಷ ರೂ. ಠೇವಣಿಯಿಡಲು ಸೂಚಿಸಿ, ಜೂ.21ರಂದು ನಡೆಯುವ ಡೆಂಟಲ್ ಪರೀಕ್ಷೆ ಬರೆಯಲು ತಾತ್ಕಾಲಿಕ ಅವಕಾಶ ನೀಡಿದೆ.
ಈ ಸಂಬಂಧ ವಿ.ಎಸ್.ಡೆಂಟಲ್ ಕಾಲೇಜು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News