×
Ad

ಬೆಳೆ ವಿಮಾ ಯೋಜನೆ ನೋಂದಣಿಗೆ ಜೂ.30 ಕೊನೆ ದಿನ

Update: 2016-06-20 23:18 IST

ಮಡಿಕೇರಿ, ಜೂ.20: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ 2016ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕರಿಮೆಣಸು ಮತ್ತು ಅಡಿಕೆ ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ನೋಂದಣಿ ಮಾಡಿಕೊಂಡು ಭಾಗವಹಿಸಬಹುದು. ಹೆಸರು ನೋಂದಾಯಿಸಿಕೊಳ್ಳಲು ಜೂ.30 ಕೊನೆ ದಿನವಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಆರ್.ಗಿರೀಶ್ ತಿಳಿಸಿದ್ದಾರೆ. ಯೋಜನೆಯಡಿ ಕರಿಮೆಣಸಿಗೆ ವಿಮಾ ಮೊತ್ತ (ಪ್ರತಿ ಹೆಕ್ಟೇರ್‌ಗೆ) 50 ಸಾವಿರ ರೂ., ವಾಣಿಜ್ಯ ವಿಮಾ ಕಂತಿನ ದರ ಶೇ, 17.12, ರೈತರು ಪಾವತಿಸಬೇಕಾದ ಕಂತು 8,560 ರೂ. ಆಗಿದೆ. ಇದರಲ್ಲಿ ಪ್ರತಿ ವಿಮಾ ಕಂತಿನ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾಗಳಿಂದ ತಲಾ 3,030ರೂ. ರಿಯಾಯಿತಿ ಸಿಗಲಿದ್ದು ರೈತರು 2,500 ರೂ. ಪಾವತಿಸಬೇಕಾಗುತ್ತದೆ. ಅಡಿಕೆಗೆ ವಿಮಾ ಮೊತ್ತ (ಪ್ರತಿ ಹೆಕ್ಟೇರ್‌ಗೆ) 1,25000 ರೂ., ವಾಣಿಜ್ಯ ವಿಮಾ ಕಂತಿನ ದರ ಶೇ, 12.12 ರೈತರ ಪಾವತಿಸಬೇಕಾದ ಕಂತು 15,150 ರೂ. ಆಗಿದೆ. ಇದರಲ್ಲಿ ಪ್ರತಿ ವಿಮಾ ಕಂತಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಂದ ತಲಾ 4,450 ರೂ. ರಿಯಾಯಿತಿ ಸಿಗಲಿದ್ದು ರೈತರು 6, 250 ರೂ. ಪಾವತಿಸಬೇಕಾಗುತ್ತದೆ

ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಜಿಲ್ಲೆಯಲ್ಲಿ ಬೆಳೆವಾರು ಸರಾಸರಿ ಬೆಳೆಸಾಲ ಮೊತ್ತಕ್ಕೆ ಸಮನಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಯೋಜನೆ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್ ಲೈನ್ ಪೋರ್ಟಲ್ samrakshane.nic.in ಮೂಲಕ ನೋಂದಾಯಿಸಬಹುದಾಗಿದೆ.

ಜಿಲ್ಲೆಗೆ ಸಂಬಂಧಿಸಿದಂತೆ ಯೂನಿವರ್ಸಲ್ ಸೋಂಪು ಜನರಲ್ ಇನ್ಸೂರೆನ್ಸ್ ಕಂಪೆನಿ ಲಿ. ಅಧಿಕೃತ ವಿಮಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ, ಈ ಯೋಜನೆಯಡಿ ಒಳಪಡುವ ಎಲ್ಲ ಬೆಳೆಗಳಿಗೂ ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ನೋಂದಾವಣೆ ಮಾಡಿಕೊಂಡು ಭಾಗವಹಿಸಬಹುದು, ನೋಂದಾಯಿಸಿಕೊಳ್ಳಲು ಕೊನೆಯ ದಿನ ಜೂನ್. 30 ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲೆಯ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆಯ ಅಧಿಕಾರಿ ಸಿಬ್ಬಂದಿಯನ್ನು ಸಂಪರ್ಕಿಸಬಹುದಾಗಿದೆ.

ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯು ಜಿಲ್ಲೆಯಲ್ಲಿ ಹೋಬಳಿ ಮತ್ತು ಬೆಳೆಗಳ ಪಟ್ಟಿ ತಯಾರಿಸಿದ್ದು ಅದರಂತೆ ಮಡಿಕೇರಿ ತಾಲೂಕಿನ ಭಾಗಮಂಡಲ ಮತ್ತು ಸಂಪಾಜೆ ಹೋಬಳಿಗೆ ಕಾಳುಮೆಣಸು, ಅಡಿಕೆ, ಮಡಿಕೇರಿ ಕಸಬಾ ನಾಪೋಕ್ಲು ಕಾಳುಮೆಣಸು ಬೆಳೆ, ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಸೋಮವಾರಪೇಟೆ ಕಸಬ, ಶುಂಟಿಕೊಪ್ಪ ಹೋಬಳಿಗಳಲ್ಲಿ ಕಾಳುಮೆಣಸು ಬೆಳೆ, ವೀರಾಜಪೇಟೆ ತಾಲೂಕಿನ ಅಮ್ಮತಿ, ಪೊನ್ನಂಪೇಟೆ, ಶ್ರೀಮಂಗಲಕ್ಕೆ ಕಾಳುಮೆಣಸು ಹಾಗೂ ಅಡಿಕೆ ಮತ್ತು ಬಾಳೆಲೆ, ಹುದಿಕೇರಿ, ವೀರಾಜಪೇಟೆ ಕಸಬಾ ಹೋಬಳಿಗಳಿಗೆ ಕಾಳುಮೆಣಸು ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News