×
Ad

ನಗರಸಭೆಯಿಂದ ಸೆಪ್ಟಿಕ್ ಟ್ಯಾಂಕ್ ತೆರವು

Update: 2016-06-20 23:20 IST

ಕಾರವಾರ, ಜೂ.20: ನಗರದ ಕೋಡಿಭಾಗದಲ್ಲಿರುವ ಅರ್ಜುನ ಚಿತ್ರಮಂದಿರದ ಪಕ್ಕದ ಅಪಾರ್ಟ್‌ಮೆಂಟ್‌ನ ಅನಧಿಕೃತ ಸೆಪ್ಟಿಕ್ ಟ್ಯಾಂಕ್‌ನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು. ಅಪಾರ್ಟ್‌ಮೆಂಟ್‌ನವರು ಚರಂಡಿ ಪಕ್ಕದಲ್ಲಿ ನಿರ್ಮಿಸಿರುವ ಸೆಪ್ಟಿಕ್ ಟ್ಯಾಂಕ್‌ನಿಂದ ಚರಂಡಿಗೆ ತ್ಯಾಜ್ಯಗಳನ್ನು ಬಿಡುವ ದುರುದ್ದೇಶ ಇದೆ. ಕಾರವಾರ-ಕೋಡಿಭಾಗ ರಸ್ತೆ ಅಗಲೀಕರಣಕ್ಕಾಗಿ ನೂರಾರು ಮನೆಗಳ ಗೋಡೆಗಳನ್ನು, ಮುಂಭಾಗದ ಶೆಡ್, ಕಾಂಪೌಂಡ್‌ಗೋಡೆಗಳನ್ನು ನೆಲಸಮಗೊಳಿಸಲಾಗಿದೆ. ನೀವು, ಈಗ ಏಕಾಏಕಿ ತೆರವುಗೊಳಿಸುವುದು ಬೇಡ ಎಂದು ಹೇಳುತ್ತಿರುವುದು ಸರಿಯಲ್ಲ. ಇಷ್ಟು ದಿನ ಒಂದು ಸಲವೂ ಇತ್ತಕಡೆ ತಲೆ ಹಾಕದ ಶಾಸಕರು ಸೆಪ್ಟಿಕ್ ಟ್ಯಾಂಕ್ ತೆಗೆಯಬಾರದೆಂದು ಪರವಾಗಿ ಮಾತನಾಡಿರುವುದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಜನರನ್ನು ಸಮಾಧಾನ ಪಡಿಸಿ, ಕೋಡಿಭಾಗ ರಸ್ತೆಯಲ್ಲಿ ಎಲ್ಲ ಮನೆಯವರು, ಅಂಗಡಿಯವರು ರಸ್ತೆಗಾಗಿ ಸ್ಥಳ ನೀಡಿದ್ದಾರೆ. ಇವರ ಒಂದು ಕಟ್ಟಡ ಬಿಡಲು ಸಾಧ್ಯವಿಲ್ಲ. ಎಲ್ಲರಿಗೂ ಒಂದೇ ರೀತಿಯ ನ್ಯಾಯ ಒದಗಿಸುವುದು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ. ಪರಿಸ್ಥಿತಿ ಅರಿತು ಅವರೇ ತೆಗೆದರೆ ಒಳಿತು. ಇಲ್ಲವಾದಲ್ಲಿ ಪೊಲೀಸ್ ಬಿಗಿಭದ್ರತೆಯಲ್ಲಿ ನಗರಸಭೆಯವರೆ ತೆರವುಗೊಳಿಸುತ್ತಾರೆ ಎಂದು ಸ್ವತಃ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ನಿವಾಸಿಗಳಿಗೆ ಭರವಸೆ ನೀಡಿದರು.

ಅದರಂತೆ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದರು. ಪೊಲೀಸರು ಈ ಕಾರ್ಯಾಚರಣೆಗೆ ಭದ್ರತೆ ಒದಗಿಸಿದ್ದರು. ಈ ಸಂದರ್ಭದಲ್ಲಿ ನಗರ ಸಭೆ ಆಯುಕ್ತ ಜತ್ತನ್ನ, ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೋಹನ್‌ರಾಜ್, ಪರಿಸರ ಇಂಜಿನಿಯರ್ ಮಲ್ಲಿಕಾರ್ಜುನ, ಯಾಕೂಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News