×
Ad

ಮಕ್ಕಳ ಹಕ್ಕುಗಳಿಗೆ ಅಡ್ಡಿಪಡಿಸಿದರೆ ಕ್ರಮ ವಹಿಸಿ: ನ್ಯಾ.ಎನ್.ವಿ.ಅರವಿಂದ್

Update: 2016-06-20 23:31 IST

ಮೂಡಿಗೆರೆ, ಜೂ.20: ಭಾರತೀಯ ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳು ಚಾಲ್ತಿಯಲ್ಲಿದೆ. ಅವರು ತಮ್ಮ ಹಕ್ಕುಗಳನ್ನು ಪಡೆಯಲು ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವು ಕಾನೂನಿನಲ್ಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ.ಅರವಿಂದ್ ಅಭಿಪ್ರಾಯಪಟ್ಟರು.

ಚೈತನ್ಯ ಹಾಲ್‌ನಲ್ಲಿ ಕಾನೂನು ಸೇವೆಗಳ ಸಮಿತಿ, ಹಮಾಲಿ ಕಾರ್ಮಿಕರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

14 ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಕಳಿಸುವ ಬದಲು ಕೂಲಿ ಕೆಲಸಕ್ಕೆ ಕಳುಹಿಸಿದಲ್ಲಿ ಕಾನೂನು ಪ್ರಕಾರ ಅಪರಾಧವಾಗಿದೆ. ಅಂತಹ ಮಕ್ಕಳನ್ನು ದುಡಿಸಿಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣಕ್ಕೆ ಕನಿಷ್ಠ 20ರಿಂದ 50 ಸಾವಿರ ದಂಡ, 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಯಾಗಲಿದೆ ಎಂದರು.

ಬಡತನ ಅನಕ್ಷರತೆ, ಮಕ್ಕಳ ನಿರ್ಲಕ್ಷ್ಯದಿಂದಾಗಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಮೂಲಕ ಮಕ್ಕಳ ಮುಂದಿನ ಜೀವನದ ಬಗ್ಗೆ ಪೋಷಕರು ಚಿಂತಿಸಬೇಕಾಗಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತಾರಾಷ್ಟ್ರೀಯ ಒಡಂಬಡಿಕೆ ಪ್ರಕಾರ ಶಾಶ್ವತ ಆಹಾರ ಬಲವರ್ಧನೆಯಂತಹ ದೊಡ್ಡ ಮಟ್ಟದ ಯೋಜನೆ ಜಾರಿಯಲ್ಲಿದೆ. ಪೋಷಕರು ಸರಕಾ ರದ ಸವಲತ್ತುಗಳನ್ನು ಪಡೆದುಕೊಂಡು ಮಕ್ಕಳಿಗೆ ತಲುಪಿಸಲು ಈ ಒಡಂಬಡಿಕೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ವಕೀಲ ಜಿ.ಬಿ.ನಟರಾಜ್ ಮಾತನಾಡಿ, ಮಕ್ಕಳನ್ನು ತಮ್ಮ ಮನೆಯಲ್ಲಿ ಸಂಜೆ 7 ಗಂಟೆ ನಂತರ ಹಾಗೂ ಬೆಳಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಪೋಷಕರು ಸಹ ದುಡಿಸಿಕೊಳ್ಳಬಾರದು ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಬೀಡಿ ತಯಾರಿಕೆಯಂತಹ ತಂಬಾಕುಗಳ ಕೆಲಸಕ್ಕೆ ಮಕ್ಕಳನ್ನು ಸೇರಿಸಿಕೊಂಡರೆ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುವ ಸಾಧ್ಯತೆಗಳಿರುತ್ತದೆ ಎಂದು ವಿವರ ನೀಡಿದರು.

ಈ ಸಂದರ್ಭದಲ್ಲಿ ಸರಕಾರಿ ಅಭಿಯೋಜಕ ಸುನೀಲ್ ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ಚಂದ್ರು, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಗೌಸ್ ಮೊಹಿದ್ದೀನ್, ಪ್ರಭಾರ ಸಿಡಿಪಿಓ ನೀಲಮ್, ವಕೀಲ ಕೆ.ಟಿ.ಮಹೇಶ್, ಎಂ.ವಿ.ಜಯರಾಂ, ರಾಘವೇಂದ್ರ, ಫಿಶ್ ಮೋಣು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News