×
Ad

ಕಡೂರು: ವರಪ್ರದ ಕಾಲೇಜು ಪ್ರಾರಂಭೋತ್ಸವ

Update: 2016-06-20 23:32 IST

 ಕಡೂರು, ಜೂ.20: ಜಗತ್ತು ಕತ್ತಲೆ ಯಿಂದ ಬೆಳಕಿನೆಡೆಗೆ ಸಾಗಬೇಕಿದೆ. ಸಾವಿರಾರು ವರ್ಷಗಳಿಂದ ಈ ನೆಲದಲ್ಲಿ ಸಂಸ್ಕಾರ ಉಳಿದಿದೆ. ಹಿಂದಿನ ಕಾಲದಲ್ಲಿ ಶಿಕ್ಷಕರು ಬ್ರಹ್ಮನ ರೂಪದಲ್ಲಿ ಕಾಣುತ್ತಿದ್ದರು. ಈಗಿನ ಶಿಕ್ಷಕರೂ ಸಹ ಮಕ್ಕಳಿಗೆ ಅದೇ ರೂಪದಲ್ಲಿ ಕಾಣಬೇಕಿದೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್ ತಿಳಿಸಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಾನಗೊಂಡ ವರಪ್ರದ ಕಾಲೇಜು ಪ್ರಾರಂಭೋತ್ಸವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ಇತ್ತೀಚಿಗೆ ಸಮಾಜ ಅಶಾಂತಿಯಿಂದ ಬೇಯುತ್ತಿದೆ. ಶಿಕ್ಷಣಕ್ಕೆ ತನ್ನದೇ ಆದ ಶಕ್ತಿ ಇದೆ. ಶಿಕ್ಷಣ ಸಂಸ್ಥೆಗಳು ಪರಿಣಾ ಮಕಾರಿಯಾಗಿದ್ದರೆ ಆ ಪ್ರದೇಶಗಳೂ ಸಹ ಗುರುತಿಸಲ್ಪಡುತ್ತವೆ. ಈಗಿನ ಶಿಕ್ಷಣಕ್ಕೂ ಹಿಂದಿನ ಶಿಕ್ಷಣಕ್ಕೂ ಬಹಳ ವ್ಯತ್ಯಾಸಗಳಿವೆ. ಸಮಾಜದಲ್ಲಿ ಬೇರೆಲ್ಲರಿಗಿಂತಲೂ ಶಿಕ್ಷಕರಿಗೆ ಉತ್ತಮ ಸ್ಥಾನಮಾನವಿದೆ. ಸಂಸ್ಕೃತಿ, ನೈತಿಕತೆಯನ್ನು ಶಿಕ್ಷಕ ಮಕ್ಕಳಲ್ಲಿ ತುಂಬಬೇಕಿದೆ ಎಂದು ಹೇಳಿದರು.

ಪಿಯು ಮಂಡಳಿಯ ಜಿಲ್ಲಾ ಉಪನಿರ್ದೇಶಕ ಚಂದ್ರಶೇಖ ರಯ್ಯ ಜ್ಯೋತಿ ಬೆಳಗಿಸಿ ಮಾತ ನಾಡಿ, ಸ್ಥಳೀಯ ಪ್ರತಿಭೆಗಳು ಹೊರಹೋಗು ವುದನ್ನು ತಡೆಯಲು ಈ ವರಪ್ರದ ಕಾಲೇಜು ಪ್ರಾರಂಭವಾಗಿದೆ. ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಸ್ಥಳೀಯ ಮಕ್ಕಳು ಎಲ್ಲಿಯೋ ಹೋಗಿ ಶಿಕ್ಷಣ ಪಡೆಯುವ ಬದಲು ಉತ್ತಮವಾದ ಶಿಕ್ಷಣ ಇಲ್ಲಿಯೇ ಪಡೆಯಬಹುದಾಗಿದೆ ಎಂದರು.

ವರಪ್ರದ ಕಾಲೇಜು ಕ್ರಾಂತಿಕಾರಕ ಶಿಕ್ಷಣ ನೀಡಲಿದೆ. ಪೋಷಕರು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕಿದೆ. ಆಧುನಿಕ ತಂತ್ರಜ್ಞಾನವನ್ನು ಈ ಕಾಲೇಜಿನಲ್ಲಿ ನೀಡಲಾಗುತ್ತದೆ. ಮಕ್ಕಳು ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ, ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೇಕಿದೆ ಎಂದರು.

 ಕಾಲೇಜು ಪ್ರಾಂಶುಪಾಲ ಕಾಂತರಾಜು ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಚಂದ್ರವೌಳಿ, ಕಾಲೇಜು ಕಾರ್ಯದರ್ಶಿ ಲೋಕೇಶ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಯಪ್ಪ ಹಾಗೂ ವರಪ್ರದ ಕಾಲೇಜು ಅಧ್ಯಕ್ಷ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News