ಹೊಸ ಬೆಳಕಿನ ಶೋಧದಲ್ಲಿ ದ್ವಿಭಾಷಾ ಕವನ ಸಂಕಲನ ಲೋಕಾರ್ಪಣೆ

Update: 2016-06-20 18:05 GMT

 ಅಂಕೋಲಾ, ಜೂ.20: ಹೆಣ್ಣಿನ ಸಂಕೀರ್ಣ ಅನುಭವಗಳನ್ನು ನೀತಾ ಅವರ ಕವನಗಳು ಸರಳ ಭಾಷೆಯಲ್ಲಿ ಕಟ್ಟಿಕೊಡುತ್ತವೆ. ಅವರ ‘ಹೊಸ ಬೆಳಕಿನ ಶೋಧದಲ್ಲಿ’ ಕವನಗಳಲ್ಲಿ ಪ್ರತಿಭಟನೆಯ ಅಂಶ ಕಡಿಮೆ ಎಂದೆನಿಸಿದರೂ ಕವಯತ್ರಿ ಹೆಣ್ಣು-ಗಂಡಿನ ನಡುವಿನ ಸಂಬಂಧದ ಎಳೆಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ಕವಯತ್ರಿ ಶ್ರೀದೇವಿ ಕೆರೆಮನೆ ಹೇಳಿದ್ದಾರೆ.

ಗೋವಾದ ಕವಯತ್ರಿ ಪ್ರೊ. ನೀತಾ ತೋರಣೆ ಅವರ ಆಯ್ದ ಕವನಗಳ ಕನ್ನಡ ಮತ್ತು ಇಂಗ್ಲಿಷ್ ಅನುವಾದಿತ ‘ಹೊಸ ಬೆಳಕಿನ ಶೋಧದಲ್ಲಿ’ ಎಂಬ ಕೃತಿಯನ್ನು ಪಟ್ಟಣದ ಪೂರ್ಣಪ್ರಜ್ಞಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅನಾವರಣಗೊಳಿಸಿ ಬಳಿಕ ಮಾತನಾಡುತ್ತಿದ್ದರು.

ಎಲ್.ಇ.ಪ.ಪೂ. ಕಾಲೇಜಿನ ಪ್ರಾಚಾರ್ಯೆ ಡಾ. ಮಿನಲ್ ನಾರ್ವೇಕರ ಮಾತನಾಡಿ, ಈ ಕವನಗಳು ಹೆಣ್ಣಿನ ಅಂತರಾಳದ ನೋವಿನ ಪ್ರತಿಬಿಂಬಗಳಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವಿವಿಧ ಬಗೆಯಲ್ಲಿ ಶೋಷಣೆಗೊಳಗಾಗುತ್ತಿದ್ದಾಳೆ. ನೀತಾ ಅವರ ಕವನಗಳು ಸಮಾಜಮುಖಿಯಾಗಿವೆ. ಇದನ್ನು ಪ್ರೊ. ಮೋಹನ ಹಬ್ಬು ಅವರು ಕನ್ನಡಕ್ಕೆ ಅನುವಾದಿಸಿರುವುದು ಶ್ಲಾಘನೀಯ ಎಂದರು.

 ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ ಗಾಂವಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ನೇಹಾ ನಾರ್ವೇಕರ, ರೇಣುಕಾ ರಮಾನಂದ, ಝರಿನಾ ವಾಚಿಸಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಅನಿಸಿಕೆ ವ್ಯಕ್ತಪಡಿಸಿದರು. ಪ್ರಜ್ಞಾ ಪ್ರಕಾಶನದ ಸಂಚಾಲಕಿ ಪ್ರಭಾ ಹಬ್ಬು ಉಪಸ್ಥಿತರಿದ್ದರು. ಉಪನ್ಯಾಸಕಿ ಹೊನ್ನಮ್ಮ ನಾಯಕ ಸ್ವಾಗತಿಸಿದರು. ವೀಣಾ ಜೋಶಿ ನಿರ್ವಹಿ ಸಿದರು. ಲೇಖಕ ಪ್ರೊ. ಮೋಹನ ಹಬ್ಬು ವಂದಿಸಿದರು.

  ಹೊಸ ಬೆಳಕಿನ ಶೋಧದಲ್ಲಿ ದ್ವಿಭಾಷಾ ಕವನ ಸಂಕಲನ ಲೋಕಾರ್ಪಣೆ ಅಂಕೋಲಾ, ಜೂ.20: ಹೆಣ್ಣಿನ ಸಂಕೀರ್ಣ ಅನುಭವಗಳನ್ನು ನೀತಾ ಅವರ ಕವನಗಳು ಸರಳ ಭಾಷೆಯಲ್ಲಿ ಕಟ್ಟಿಕೊಡುತ್ತವೆ. ಅವರ ‘ಹೊಸ ಬೆಳಕಿನ ಶೋಧದಲ್ಲಿ’ ಕವನಗಳಲ್ಲಿ ಪ್ರತಿಭಟನೆಯ ಅಂಶ ಕಡಿಮೆ ಎಂದೆನಿಸಿದರೂ ಕವಯತ್ರಿ ಹೆಣ್ಣು-ಗಂಡಿನ ನಡುವಿನ ಸಂಬಂಧದ ಎಳೆಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದು ಕವಯತ್ರಿ ಶ್ರೀದೇವಿ ಕೆರೆಮನೆ ಹೇಳಿದ್ದಾರೆ.

ಗೋವಾದ ಕವಯತ್ರಿ ಪ್ರೊ. ನೀತಾ ತೋರಣೆ ಅವರ ಆಯ್ದ ಕವನಗಳ ಕನ್ನಡ ಮತ್ತು ಇಂಗ್ಲಿಷ್ ಅನುವಾದಿತ ‘ಹೊಸ ಬೆಳಕಿನ ಶೋಧದಲ್ಲಿ’ ಎಂಬ ಕೃತಿಯನ್ನು ಪಟ್ಟಣದ ಪೂರ್ಣಪ್ರಜ್ಞಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅನಾವರಣಗೊಳಿಸಿ ಬಳಿಕ ಮಾತನಾಡುತ್ತಿದ್ದರು.

ಎಲ್.ಇ.ಪ.ಪೂ. ಕಾಲೇಜಿನ ಪ್ರಾಚಾರ್ಯೆ ಡಾ. ಮಿನಲ್ ನಾರ್ವೇಕರ ಮಾತನಾಡಿ, ಈ ಕವನಗಳು ಹೆಣ್ಣಿನ ಅಂತರಾಳದ ನೋವಿನ ಪ್ರತಿಬಿಂಬಗಳಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವಿವಿಧ ಬಗೆಯಲ್ಲಿ ಶೋಷಣೆಗೊಳಗಾಗುತ್ತಿದ್ದಾಳೆ. ನೀತಾ ಅವರ ಕವನಗಳು ಸಮಾಜಮುಖಿಯಾಗಿವೆ. ಇದನ್ನು ಪ್ರೊ. ಮೋಹನ ಹಬ್ಬು ಅವರು ಕನ್ನಡಕ್ಕೆ ಅನುವಾದಿಸಿರುವುದು ಶ್ಲಾಘನೀಯ ಎಂದರು.

 ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ ಗಾಂವಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ನೇಹಾ ನಾರ್ವೇಕರ, ರೇಣುಕಾ ರಮಾನಂದ, ಝರಿನಾ ವಾಚಿಸಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಅನಿಸಿಕೆ ವ್ಯಕ್ತಪಡಿಸಿದರು. ಪ್ರಜ್ಞಾ ಪ್ರಕಾಶನದ ಸಂಚಾಲಕಿ ಪ್ರಭಾ ಹಬ್ಬು ಉಪಸ್ಥಿತರಿದ್ದರು. ಉಪನ್ಯಾಸಕಿ ಹೊನ್ನಮ್ಮ ನಾಯಕ ಸ್ವಾಗತಿಸಿದರು. ವೀಣಾ ಜೋಶಿ ನಿರ್ವಹಿ ಸಿದರು. ಲೇಖಕ ಪ್ರೊ. ಮೋಹನ ಹಬ್ಬು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News