ಖಾದರ್ ಕೈತಪ್ಪಿದ ಆರೋಗ್ಯ ಖಾತೆ

Update: 2016-06-21 07:22 GMT

ಬೆಂಗಳೂರು, ಜೂ.21: ಸಂಪುಟ ಪುನಾರಚನೆಯಲ್ಲಿ ಮಂತ್ರಿ ಸ್ಥಾನ ಉಳಿಸಿಕೊಂಡಿರುವ ಯು.ಟಿ ಖಾದರ್ ಅವರಿಂದ ಆರೋಗ್ಯ ಇಲಾಖೆ ಕೈತಪ್ಪಿದೆ. ಹೊಸ ಖಾತೆ ಹಂಚಿಕೆಯಲ್ಲಿ ಖಾದರ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೀಡಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.


ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಖಾತೆಯ ಪುನರ್‌ರಚನೆಯಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡು ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರು ನಿರ್ವಹಿಸುತ್ತಿದ್ದರು.

ಆರೋಗ್ಯ ಇಲಾಖೆಯನ್ನು ನೂತನ ಸಚಿವ ರಮೇಶ್ ಕುಮಾರ್ ಅವರಿಗೆ, ಕಂದಾಯ ಖಾತೆಯನ್ನು ಕಾಗೋಡು ತಿಮ್ಮಪ್ಪ ನವರಿಗೆ ಪ್ರವಾಸೋದ್ಯಮ ಹಾಗೂ ಐಟಿ-ಬಿಟಿ ಖಾತೆಯನ್ನು ಪ್ರಿಯಾಂಕ್ ಖರ್ಗೆ ಅವರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಈ ಪಟ್ಟಿಯನ್ನು ಮುಖ್ಯಮಂತ್ರಿ ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ. 

ನೂತನ ಸಚಿವರಿಗೆ ಖಾತೆ ಹಂಚಿಕೆ

ಕಾಗೋಡು ತಿಮ್ಮಪ್ಪ - ಕಂದಾಯ
ರಮೇಶ್ ಕುಮಾರ್-  ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಪ್ರಿಯಾಂಕ್ ಖರ್ಗೆ-  ಪ್ರವಾಸೋದ್ಯಮ, ಐಟಿ-ಬಿಟಿ
ರಮೇಶ್ ಜಾರಕಿಹೊಳಿ - ಸಣ್ಣ ಕೈಗಾರಿಕೆ
ಹೆಚ್.ವೈ.ಮೇಟಿ - ಅಬಕಾರಿ
ಬಸವರಾಜ ರಾಯರೆಡ್ಡಿ -ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಪ್ರಮೋದ್ ಮಧ್ವರಾಜ್ - ಮೀನುಗಾರಿಕೆ ಮತ್ತು ಬಂದರು
ಈಶ್ವರ ಖಂಡ್ರೆ-  ಪೌರಾಡಳಿತ
ತನ್ವೀರ್ ಸೇಠ್-  ಉನ್ನತ ಶಿಕ್ಷಣವಕ್ಫ್ ಮತ್ತು ಹಜ್
ರೋಷನ್ ಬೇಗ್ - ನಗರಾಭಿವೃದ್ಧಿ 
ಯು.ಟಿ.ಖಾದರ್ - ಆಹಾರ ಮತ್ತು ನಾಗರಿಕ ಸರಬರಾಜು
ಸಂತೋಷ ಲಾಡ್ - ಕಾರ್ಮಿಕ
ರುದ್ರಪ್ಪ ಲಮಾಣಿ - ಜವಳಿ, ಮುಜರಾಯಿ
ಎಸ.ಎಸ್.ಮಲ್ಲಿಕಾರ್ಜುನ - ತೋಟಗಾರಿಕೆ ಮತ್ತು ಎಪಿಎಂಸಿ
ಎಂ.ಆರ್.ಸೀತಾರಾಂ - ಯೋಜನೆ ಮತ್ತು ಸಾಂಖ್ಯಿಕ
ಟಿ.ಬಿ.ಜಯಚಂದ್ರ - ಕಾನೂನು ಮತ್ತು ಸಂಸದೀಯ ಜೊತೆಗೆ ಹೆಚ್ಚುವರಿಯಾಗಿ ಸಣ್ಣ ನೀರಾವರಿ
ಆರ್.ವಿ.ದೇಶಪಾಂಡೆ - ಬೃಹತ್ ಕೈಗಾರಿಕೆ ಹೆಚ್ಚುವರಿಯಾಗಿ ಮೂಲಸೌಕರ್ಯ

ವಸತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಹಣಕಾಸು, ಯುವಜನಸೇವೆ, ಕ್ರೀಡೆ ಖಾತೆಯನ್ನು ಸಿಎಂ ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News