‘ನನ್ನನ್ನು ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು’
Update: 2016-06-21 12:50 IST
ಬೆಂಗಳೂರು, ಜೂ.21: ಇತ್ತೀಚೆಗೆ ನಡೆದ ಸಂಪುಟ ಪುನರ್‌ರಚನೆ ವೇಳೆ ಸಚಿವ ಸ್ಥಾನ ಕಳೆದುಕೊಂಡಿದ್ದ ಮಂಡ್ಯ ಶಾಸಕ ಅಂಬರೀಷ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
‘‘ಶ್ರೀನಿವಾಸ್ ಪ್ರಸಾದ್‌ರಂತಹ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಯಾರೂ ಇಲ್ಲ. ಅವರನ್ನೇ ಸಂಪುಟದಿಂದ ಕೈಬಿಟ್ಟ ಮೇಲೆ ನಾನು ಯಾವ ಲೆಕ್ಕ. ನನ್ನನ್ನು ಸ್ವಲ್ಪ ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು. ಮುಖ್ಯಮಂತ್ರಿಗಳ ವರ್ತನೆ ನನಗೆ ನೋವುಂಟು ಮಾಡಿದೆ’’ ಎಂದು ಅಂಬರೀಷ್ ಗುಡುಗಿದ್ದಾರೆ.
‘‘ಸಚಿವನಾಗಿದ್ದಾಗ ನಾನು ಮುಖ್ಯಮಂತ್ರಿಯನ್ನ್ನು ಹೆಚ್ಚು ಭೇಟಿಯಾಗಿರಲಿಲ್ಲ. ಸಚಿವನಾಗಿರಲು ಅಸಮರ್ಥ ಎಂದು ಹೇಳಿದ ಮೇಲೆ ಶಾಸಕನಾಗಿ ಯಾಕೆ ಮುಂದುವರಿಯಬೇಕು ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ’’ ಎಂದು ಅಂಬರೀಷ್ ಹೇಳಿದ್ದಾರೆ.