×
Ad

ಯೋಗ ಒಂದು ಧರ್ಮಕ್ಕೆ ಸೀಮಿತವಲ್ಲ: ಸಿಎಂ

Update: 2016-06-21 23:03 IST

ಬೆಂಗಳೂರು, ಜೂ. 21: ಆರೋಗ್ಯದ ದೃಷ್ಟಿಯಿಂದ ಯೋಗವನ್ನು ಎಲ್ಲ ಧರ್ಮದವರು ಮಾಡಬಹುದು. ಇದು ಒಂದು ಧರ್ಮಕ್ಕೆ ಸೀಮಿತವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯುಷ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಕರ್ನಾಟಕ ಒಲಿಂಪಿಕ್ಸ್‌ಅಸೋಸಿಯೇಷನ್ ಸಹಯೋಗದಲ್ಲಿ ಶ್ವಾಸ ಸಂಸ್ಥೆ ಏರ್ಪ ಡಿಸಿದ್ದ 2ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
 ವಿಶ್ವ ಸಂಸ್ಥೆಯೇ ಜೂ.21 ರಂದು ಯೋಗ ದಿನವನ್ನಾಗಿ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ, ಯೋಗ ಭಾರತೀಯ ಸಂಸ್ಕೃತಿಯಲ್ಲಿ ಋಷಿ ಮುನಿಗಳು ಸಮಾಜಕ್ಕೆ ನೀಡಿರುವಂತಹ ಒಂದು ಕೊಡುಗೆ. ಊಟ ಬಲ್ಲವನಿಗೆ ರೋಗವಿಲ್ಲ- ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿದೆ. ಅದನ್ನು ಇಂದು ನಾವು ಯೋಗ ಬಲ್ಲವನಿಗೆ ರೋಗವಿಲ್ಲ ಎಂದು ಬದಲಿಸಬಹುದು ಕಾರಣ ಯೋಗ ಪ್ರತಿಯೊಬ್ಬರ ಆರೋಗ್ಯ ಮತ್ತು ಮಾನಸಿಕ ಸಮತೋಲನಕ್ಕೆ ಅಷ್ಟು ಮುಖ್ಯವಾದದ್ದು. ಇನ್ನೊಬ್ಬರಿಗೆ ನೋವಾಗದಂತೆ ಮಾತನಾಡುವುದನ್ನು ರೂಢಿಸಿಕೊಳ್ಳಲು ಯೋಗ ಬಹಳ ಮುಖ್ಯ ಎಂದರು.
ನಾನೂ ಸಹ ಪ್ರತಿ ದಿನ ಯೋಗಾಭ್ಯಾಸ ಮಾಡು ತ್ತಿದ್ದು, ಅದರಿಂದ ಅನೇಕ ಶಾರೀರಿಕ ಮತ್ತು ಮಾನಸಿಕ ಬದ ಲಾವಣೆಗಳನ್ನು ಕಂಡುಕೊಂಡಿದ್ದೇನೆ. ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯಾದರೂ ಯೋಗಾ ಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು ಎಂದ ಅವರು, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆ ಹಾಗೂ ಆಯುಷ್ ಇಲಾಖೆಗಳ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ. ಶಾಲೆಗಳಲ್ಲಿ ಹಂತ ಹಂತವಾಗಿ ಕಡ್ಡಾಯವಾಗಿ ಯೋಗಶಿಕ್ಷಣ ನೀಡಬೇಕು. ಶಾಲೆಗಳಿಗೆ ಯೋಗ ಗುರುಗಳನ್ನು ನೇಮಿಸಿ ವೈಜ್ಞಾನಿಕವಾಗಿ ಯೋಗ ಶಿಕ್ಷಣ ನೀಡುವಂತಾ ಗಬೇಕು. ಅದಕ್ಕೆ ಸರಕಾರ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಚಿವ ಯು.ಟಿ. ಖಾದರ್, ಯೋಗಾಭ್ಯಾಸ ಕರ್ನಾಟಕ ಎಲ್ಲ ಭಾಗಗಳಲ್ಲಿ ಹರಡಬೇಕು, ಆ ಮೂಲಕ ಬಲಿಷ್ಠ ಭಾರತ ವನ್ನು ಕೊಡುಗೆಯಾಗಿ ಕೊಡಬೇಕು. ಔಷಧಿಗಿಂತ ಪರಿಣಾಮ ಕಾರಿಯಾಗಿ ಗುಣಪಡಿಸುವ ಶಕ್ತಿ ಯೋಗಕ್ಕಿದೆ ಮುಖ್ಯ ಮಂತ್ರಿಗಳ ಸಹಕಾರದಿಂದ ಪ್ರತಿ ಜಿಲ್ಲೆಗೂ ವಿಶೇಷ ಅನುದಾನವನ್ನು ಕೊಡುವ ಮೂಲಕ ಎಲ್ಲ ಜಿಲ್ಲೆ ಗಳಲ್ಲೂ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.


ಇಂದಿನ ಯುವಕರಿಗೆ ಸಿಗರೇಟ್ ಫ್ಯಾಷನ್ ಆಗಿದೆ. ಸ್ನೇಹಿತರೊಂದಿಗೆ ಸಿಗರೇಟ್ ಸೇದಿದವರು ಐಸಿಯುನಲ್ಲಿ ರುವಂತಾದರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಶಾಲಾ ಕಾಲೇಜುಗಳಲ್ಲಿ ಯೋಗ ಶಿಕ್ಷಕರನ್ನು ನೇಮಿಸಿ ಶಿಸ್ತಿನ ಮೂಲಕ ಯೋಗದ ಬಗ್ಗೆ ತಿಳಿವಳಿಕೆ ನೀಡುವಂತಾ ಗಬೇಕು ಎಂದು ಖಾದರ್ ನುಡಿದರು. ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದ ಕಂಠೀರವ ಕ್ರೀಡಾಂಗಣ ಸೇರಿದಂತೆ ನಗರದ ಹಲವೆಡೆ ಮುಂಜಾನೆಯಿಂದಲೇ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಹಲವಾರು ಬಗೆಯ ಯೋಗಾಸನ ಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ. ಸದಾನಂದಗೌಡ, ರಾಜ್ಯದ ಸಚಿವ ರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಟಿ.ಬಿ. ಜಯ ಚಂದ್ರ, ಶ್ವಾಸ ಗುರು ವಚನಾನಂದ ಸ್ವಾಮೀಜಿ, ಬಾಲಿವುಡ್ ನಟಿ ಬಿಪಾಶಾ ಬಸು ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News