ಸಾಂಪ್ರದಾಯಿಕ ಸ್ವಾಮಿಗಳ ಅಂತರಂಗ ಶುದ್ಧಿಯಾಗಬೇಕಿದೆ: ನಿಡುಮಾಮಿಡಿ ಶ್ರೀ
ಬೆಂಗಳೂರು, ಜೂ. 21: ಸಂವಿಧಾನವನ್ನು ವಿರೋಧಿಸುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೌಲ್ಯಗಳಿಲ್ಲ ಎಂದು ಪ್ರತಿ ಪಾದಿಸಿ, ಊಳಿಗಮಾನ್ಯ ಪದ್ಧತಿ ಮತ್ತು ಹಿಂದಿನ ಕಾಲದ ಅನಿಷ್ಟ ಪದ್ಧತಿಗಳಲ್ಲಿ ನಂಬಿಕೆ ಇಟ್ಟಿರುವ ಸಾಂಪ್ರಾದಾಯಿಕ ಸ್ವಾಮಿಗಳ ಅಂತರಂಗ ಶುದ್ಧಿಯಾಗದ ಹೊರತು ಸಮಾಜ ಶುದ್ಧಿಯಾಗದು ಎಂದು ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ನಿಡುಮಾಮಿಡಿ ಮಠದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಆಯೋಜಿಸಿದ್ದ ‘ಮಠಾ ಧೀಶರು ವಿಮರ್ಶೆಗೆ ಅತೀತರೇ’ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಠಗಳು ಮುಕ್ತವಾದ ಆಲೋಚನೆ ಉದಾರವಾದ ಮನೋಭಾವನೆಗಳನ್ನು ಹೊಂದಿಲ್ಲದ ಕಾರಣ ಸಮಾಜದಲ್ಲಿ ಸುಧಾರಣೆ ತರಲು ಹಿನ್ನೆಡೆಯಾಗುತ್ತಿದೆ. ಕೆಲ ಮಠಗಳು ಆಂತರಿ ಕವಾಗಿ ಅನಿಷ್ಟ ಪದ್ಧತಿಗಳನ್ನು ಈಗಲೂ ಆರಾಧಿಸುತ್ತಿದ್ದಾರೆ. ತೋರಿಕೆಗೆ ಮಾತ್ರ ಸ್ವಚ್ಛಂದ ವ್ಯಕ್ತಿತ್ವ ಹೊಂದಿರುವ ಸ್ವಾಮೀಜಿಗಳು ಎಂದು ಗುರಿತಿಸಿಕೊಳ್ಳುತ್ತಿದ್ದಾರೆ. ಇಂತಹ ಮನೋಭಾವನೆಗಳು ಬದಲಾವಣೆಯಾಗದ ಹೊರತು ಸಮಾಜ ಸುಧಾರಣೆಯು ಮುನ್ನೆಲೆಗೆ ಬರುವುದಿಲ್ಲ ಎಂದರು.
ನಾಲ್ಕು ದಶಕಗಳ ಹಿಂದಿನ ಮಠಗಳು ತ್ಯಾಗ, ಬಲಿದಾನ ಸೇರಿದಂತೆ, ಭಿಕ್ಷೆ ಬೇಡಿ ಸಮಾಜಕ್ಕೆ ತ್ರಿವಿಧ ದಾಸೋಹ ಮಾಡು ತ್ತಿದ್ದರು. ಆದರೆ ಹುಸಿ ವೌಲ್ಯಗಳನ್ನು ಆರಾಧಿಸುವ ಮೂಲಕ ಈಗಿನ ಮಠಗಳು ಆತ್ಮವಂಚನೆ ಮಾಡಿಕೊಳ್ಳುತ್ತಿವೆ. ತ್ಯಾಗದ ಸ್ಥಳದಲ್ಲಿ ಭೋಗ ಕುಳಿತಿದೆ. ಇಂದು ಸಾತ್ವಿಕರು ಸಮಾಜಕ್ಕೆ ಏನಾದ ರೊಂದು ಸಂದೇಶ ಹೇಳಬೇಕೆಂದು ಹೊರಟರೆ ಇಡೀ ಸಮಾ ಜವೇ ತಿರುಗಿ ಬೀಳುತ್ತದೆ. ಹಾಗಾಗಿ ಅಂತಹ ಸಂದೇಶಗಳು ಅವರಲ್ಲೇ ಉಳಿದುಕೊಂಡುಬಿಡುತ್ತವೆ ಎಂದು ಬೇಸರ ವ್ಯಕ್ತಪ ಡಿಸಿದರು.
ದೊಡ್ಡ ಸ್ವಾಮಿಗಳಿಂದ ಕಪ್ಪು ಹಣ ಪೋಷಣೆ: ವೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಮಠಗಳು ಹಣವೆಂಬ ಭೂತದ ಬೆನ್ನ ಹಿಂದೆ ಬಿದ್ದಿವೆ. ಕೆಲವು ದೊಡ್ಡ ದೊಡ್ಡ ಸ್ವಾಮೀಜಿಗಳು ಕಪ್ಪುಹಣ ಪೋಷಣೆಯಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಈ ಬಂಡವಾಳಶಾಹಿ ಮಠಗಳೇ ಇಂದು ರಾಜಕೀಯ ಮತ್ತು ಓಟ್‌ಬ್ಯಾಂಕ್ ನಿರ್ಧರಿಸುತ್ತಿವೆ ಎಂದು ಆತಂಕಪಟ್ಟರು.
ಎಡೆಯೂರು ತೋಂಟದಾರ್ಯ ಮಠದ ಡಾ.ತೋಂಟ ದಾರ್ಯ ಮಹಾಸ್ವಾಮಿ ಮಾತನಾಡಿ, ಸಾಂಪ್ರದಾಯಿಕ ಮಠ ಗಳಲ್ಲಿ ಸಾಕಷ್ಟು ಬದಲಾವಣೆಯಾ ಗಬೇಕಿದೆ. ಮಠಗಳು ಸಮಾನತೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕಿದೆ. ಪಾದ ಪೂಜೆ ಸೇರಿದಂತೆ ಇತರೆ ಅನಿಷ್ಟ ಆಚರಣೆಗಳ ಕಶ್ಮಲತೆಯನ್ನು ತೊಳೆಯಬೇಕು ಎಂದು ಕರೆ ನೀಡಿದರು.
ಆಧುನಿಕ ದಿನಮಾನಗಳಲ್ಲಿ ಯುವ ಸ್ವಾಮೀಜಿಗಳಿಗೆ ಅಪ ವಾದ ತಪ್ಪಿದ್ದಲ್ಲ. ಹೀಗಾಗಿ ಯುವ ಸ್ವಾಮೀಜಿಗಳು ಹೆಚ್ಚು ಜಾಗೃತ ರಾಗಿರಬೇಕು. ಮೊದಲು ಕಾಮವನ್ನು ನಿಗ್ರಹಿಸಲು ಕಠಿಣ ಧ್ಯಾನ ಮಾಡಬೇಕಿದೆ. ಈ ಮೂಲಕ ಸ್ವಾಮಿಗಳು ಕಾಮದಲ್ಲಿ ಸಂಶಯಾ ತೀತರಾಗಿರುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಯುವ ಸ್ವಾಮೀಜಿಗಳಿಗೆ ಕಿವಿ ಮಾತು ಹೇಳಿದರು.
ನಾಗಲೂರು ರುದ್ರಾಕ್ಷಿ ಮಠಾಧ್ಯಕ್ಷರಾದ ಸಿದ್ದರಾಮ ಮಹಾ ಸ್ವಾಮೀಜಿ, ಹಿರೇಮಠ ಸಂಸ್ಥಾನ ಮಠಾಧ್ಯಕ್ಷರಾದ ಡಾ. ಬಸವ ಲಿಂಗ ಪಟ್ಟಾಧ್ಯಕ್ಷ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
ಆಯುರ್ವೇದ ಮತ್ತು ಯೋಗವನ್ನು ದೊಡ್ಡ ಉದ್ಯಮ ಮಾಡಿಕೊಂಡಿರುವ ಬಾಬಾ ರಾಮ್‌ದೇವ್ ಇಂದು 15 ಸಾವಿರ ಕೋಟಿ ರೂ.ಗಳ ಒಡೆಯ. ಅಲ್ಲದೆ, ಸರಕಾರಕ್ಕೆ ಇದುವರೆಗೂ ನಯಾಪೈಸೆ ತೆರಿಗೆಯನ್ನು ಪಾವತಿಸದೆ ವಂಚನೆ ಮಾಡಿದ್ದಾರೆ. ದೊಡ್ಡ ಸ್ವಾಮಿಗಳು ಎಂದು ಗುರುತಿಸಿಕೊಂಡಿರುವವರು ಇಂದು ಉದ್ಯಮಿಗಳು, ದೊಡ್ಡ ಕಾರುಗಳು, ಹೆಲಿಕ್ಯಾಪ್ಟರ್‌ಗಳ ಮಾಲಕರಾಗಿದ್ದಾರೆ. ಪ್ರಧಾನಿ, ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಗಳಿಗೆೆ ಕರೆಯಿಸಿಕೊಂಡು ಮೆರೆಯುತ್ತಿದ್ದಾರೆ. ಸಂವಿಧಾನ ಮತ್ತು ನ್ಯಾಯಾಲಯವನ್ನೇ ನಿಯಂತ್ರಿಸುವ ಮಟ್ಟಕ್ಕೆ ಸ್ವಾಮಿಗಳು ಬೆಳೆದಿದ್ದಾರೆ.
- ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ