ಬಳ್ಳಾರಿ ಎಸ್ಪಿವಿರುದ್ಧ ಅನುಪಮಾ ಶೆಣೈ ದೂರು
Update: 2016-06-21 23:08 IST
ಬೆಂಗಳೂರು, ಜೂ. 21: ಬಳ್ಳಾರಿ ಜಿಲ್ಲೆಯ ಎಸ್ಪಿ ಚೇತನ್ ಆರ್. ತನ್ನ ಕೆಲಸ ಕಾರ್ಯಗಳಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅನುಪಮಾ ಶೆಣೈ ಅವರು ಜೂ.4ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಒಟ್ಟು ಏಳು ಪುಟಗಳ ದೂರು ಪ್ರತಿಯನ್ನು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.
ಬಳ್ಳಾರಿ ಎಸ್ಪಿ ಚೇತನ್ ಅವರು ಉಸ್ತುವಾರಿ ಸಚಿವರಾಗಿದ್ದ ಪರಮೇಶ್ವರ ನಾಯ್ಕ್ ಬೆಂಬಲಕ್ಕೆ ನಿಂತುಕೊಂಡು ತಮ್ಮ ಕತ್ಯರ್ವಕ್ಕೆ ಅಡ್ಡಿಪಡಿಸುವ ಮೂಲಕ ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಅನುಪಮಾ ಆರೋಪಿಸಿದ್ದಾರೆ. ಅದೇ ರೀತಿ, ಈ ಹಿಂದೆ ವರ್ಗಾವಣೆ ಆದ ವೇಳೆಯಲ್ಲಿ ಒತ್ತಡದಿಂದ ರಜೆ ಪಡೆದರೆ ಎಪ್ಪಿ ಚೇತನ್ ರಜೆ ನೀಡದೆ ತಮಗೆ ಕಿರುಕುಳ ನೀಡುವ ಮೂಲಕ ಮಹಿಳಾ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ ಎಂದು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಅವರು ಆಪಾದಿಸಿದ್ದಾರೆ.