ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಜೂ.25ಕೊನೆಯ ದಿನ
ಮಡಿಕೇರಿ, ಜೂ.21: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಲು ಹಾಗೂ ಸದಸ್ಯತ್ವ ನವೀಕರಣಗೊಳಿಸಿಕೊಳ್ಳಲು ಜಿಲ್ಲೆಯ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ (ಮುದ್ರಣ ಮತ್ತು ವಿದ್ಯುನ್ಮಾನ) ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು ಮಾತ್ರ ಸಂಘದಲ್ಲಿ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ. ಆರ್‌ಎನ್‌ಐ ನೋಂದಣಿ ಹೊಂದಿರುವ ದಿನ ಪತ್ರಿಕೆಗಳು ಎರಡು ವರ್ಷ ನಿಯಮಿತವಾಗಿ ಪ್ರಕಟಗೊಂಡಿದ್ದಲ್ಲಿ ಮಾತ್ರ ಸದಸ್ಯತ್ವ ಪಡೆಯಲು ಅರ್ಹರು. ಪ್ರಾದೇಶಿಕ ಪತ್ರಿಕೆಗಳಿಗೆ ಸಂಪಾದಕರು ಸೇರಿದಂತೆ ಐವರಿಗೆ, ಪ್ರತಿ ತಾಲೂಕಿಗೆ ಒಬ್ಬರಂತೆ, ವಾರ ಪತ್ರಿಕೆಗಳಿಗೆ ಸಂಪಾದಕರು ಸೇರಿದಂತೆ ಇಬ್ಬರಿಗೆ ನೀಡಲಾಗುವುದು. ವಾರಪತ್ರಿಕೆಗಳಿಗೆ ಆರ್‌ಎನ್‌ಐ ಕಡ್ಡಾಯವಾಗಿದ್ದ, ವರ್ಷದ 48 ವಾರಗಳಲ್ಲಿ 43 ಸಂಚಿಕೆಗಳು ಪ್ರಕಟವಾಗಿರಲೇಬೇಕು. ಈ ಬಗ್ಗೆ 43 ಸಂಚಿಕೆಗಳ ಪ್ರತಿಗಳನ್ನು ಸಲ್ಲಿಸಬೇಕಾಗಿದೆ. ಪಾಕ್ಷಿಕ, ಮಾಸಿಕ ಪತ್ರಿಕೆಗಳಿಗೆ ಸಂಪಾದಕರು ಅಥವಾ ಯಾರಿಗಾದರೂ ಒಬ್ಬರಿಗೆ ಮಾತ್ರ, ಆರ್‌ಎನ್‌ಡಿ ಕಡ್ಡಾಯ, ಕ್ರೌನ್ ಅಳತೆಯ 12 ತಿಂಗಳಲ್ಲಿ 11 ತಿಂಗಳ ಸಂಚಿಕೆ ಪ್ರಕಟಗೊಂಡಿರಬೇಕು. ಪ್ರತಿಗಳನ್ನು ಸಲ್ಲಿಸಬೇಕು. ಟಿವಿ ಮಾಧ್ಯಮದಲ್ಲಿ ಸಂಪಾದಕರು ಉಪ ಸಂಪಾದಕರು, ನ್ಯೂಸ್ ಪ್ರೊಡ್ಯೂಸರ್ಸ್, ವಿಶ್ಯುವಲ್ ಎಡಿಟರ್ಸ್, ಕಾಪಿ ಎಡಿಟರ್ಸ್, ವೀಡೀಯೊಗ್ರಾಫರ್ಸ್ ಮಾತ್ರ ಸದಸ್ಯತ್ವ ಪಡೆಯಲು ಅರ್ಹರು. ಕೇಬಲ್ ಮತ್ತು ಸುದ್ದಿವಾಹಿನಿಗಳಿಗೆ ವರದಿಗಾರ ಹಾಗೂ ಕ್ಯಾಮರಾಮೆನ್‌ಗಳಿಗೆ ಮಾತ್ರ ನೀಡಬಹುದಾಗಿದ್ದು, ವಾರ್ತಾಇಲಾಖೆಯ ಅನುಮತಿ ಪತ್ರ ಅಗತ್ಯವಾಗಿರುತ್ತದೆ. ಸರಕಾರಿ ನೌಕರರು, ಅರೆ ಸರಕಾರಿ, ಅನುದಾನಿತ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ, ವಕೀಲರು, ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಪತ್ರಿಕೆಯನ್ನು ಕ್ರಮಬದ್ಧವಾಗಿ ಹೊರತರುತ್ತಿದ್ದರೆ ಅಥವಾ ಕಾರ್ಯನಿರ್ವಹಿಸುತ್ತಿದ್ದರೆ ಅಂತವರನ್ನು ಸಹ ಸದಸ್ಯತ್ವಕ್ಕೆ ಪರಿಗಣಿಸಲಾಗುತ್ತದೆ. ಸದಸ್ಯತ್ವ ಪಡೆಯಲು ಕನಿಷ್ಠ 21 ವರ್ಷ ವಯಸ್ಸಾಗಿದ್ದು, ಕನಿಷ್ಠ ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು. ಹೊಸದಾಗಿ ಸದಸ್ಯತ್ವ ಪಡೆಯುವವರು 400 ರೂ. ಹಾಗೂ ನವೀಕರಿಸಿಕೊಳ್ಳುವವರು 300 ರೂ. ಶುಲ್ಕದೊಂದಿಗೆ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದಸ್ಯತ್ವಕ್ಕೆ ಅರ್ಜಿಗಳು ಪತ್ರಿಕಾಭವನದಲ್ಲಿ ಲಭಿಸಲಿದ್ದು, ನಿಗದಿತ ನಮೂನೆಯಲ್ಲಿ ಪೂರ್ಣ ವಿವರಗಳೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಜೂನ್ 25ರೊಳಗಡೆ ಅಧ್ಯಕ್ಷರು, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕಾ ಭವನ, ಮಡಿಕೇರಿ ಈ ವಿಳಾಸಕ್ಕೆ ಸಲ್ಲಿಸುವುದು. ಜೂ.26ರಂದು ಪರಿಶೀಲನೆ ನಡೆಯಲಿದ್ದು, ನಂತರ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ(8884432052), ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್(9972538584) ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.