×
Ad

ಕ್ಲಸ್ಟರ್ ಪದ್ಧತಿಯಲ್ಲಿ ಬಿ.ಇಡಿ ಪರೀಕ್ಷೆ

Update: 2016-06-21 23:36 IST

ಶಿವಮೊಗ್ಗ, ಜೂ.21: ಪ್ರತಿಯೊಂದು ಕಾಲೇ ಜುಗಳಲ್ಲಿ ಬಿ.ಇಡಿ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ನಡೆಸುವ ಬದಲು ಪ್ರತಿ ಜಿಲ್ಲೆ/ತಾಲೂಕು ಕೇಂದ್ರದಲ್ಲಿ ಕ್ಷಸ್ಟರ್ ಮಾದರಿಯಲ್ಲಿ ಒಂದೇ ಕೇಂದ್ರ ದಲ್ಲಿ ನಡೆಸುವುದು ಮತ್ತು ಒಟ್ಟು 10 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಬಗ್ಗೆ ಕ್ರಮಕೈಗೊಳ್ಳಲಾಯಿತು.

ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಸಿ.ಎಂ. ತ್ಯಾಗರಾಜರ ಅಧ್ಯಕ್ಷತೆಯಲ್ಲಿ ವಿವಿಯ ಪರೀಕ್ಷಾ ವಿಭಾಗದಲ್ಲಿ ನಡೆದ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಬಿ.ಇಡಿ ಕಾಲೇಜುಗಳ ಪ್ರಾಂಶುಪಾಲರ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ದೇಶಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿರುವ ಭಾವೀ ಶಿಕ್ಷಕರನ್ನು ತರಬೇತುಗೊಳಿಸುವ ಬಿ.ಇಡಿ ಕಾಲೇಜುಗಳ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮತ್ತು ಸರಕಾರದ ಆದೇಶಗಳ ಪಾಲನೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳುವುದಾಗಿ ಸಭೆ ತೀರ್ಮಾನಿಸಿದೆ.ಪ್ರಸ್ತುತ 18 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಕ್ಷಸ್ಟರ್ ಪದ್ಧತಿಯಲ್ಲಿ ಅವುಗಳನ್ನು 10 ಕೇಂದ್ರಗಳಿಗೆ ಸೀಮಿತಗೊಳಿಸುವ ಬಗ್ಗೆ ಮಹತ್ತರದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಕುಲಪತಿ ಪ್ರೊ. ಜೋಗನ್ ಶಂಕರ್‌ರವರು ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆಗಳನ್ನು ನಡೆಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. ಸಭೆಯಲ್ಲಿ ಶಿಕ್ಷಣ ನಿಕಾಯದ ಡೀನ್ ಡಾ.ಎಸ್.ಎಂ. ಪ್ರಕಾಶ್, ಕಾಲೇಜು ಅಭಿವೃದ್ಧಿ ಪರಿಷತ್‌ನ ನಿರ್ದೇಶಕ ಡಾ. ಬಿ. ಗಣೇಶ ಮತ್ತು ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್. ಪಾಟೀಲ್ ಉಪಸ್ಥಿತರಿದ್ದರು. ಎಂ.ಎಸ್. ವೇದಾವತಿ ಪ್ರಾರ್ಥನೆಗೈದರು. ಸಿ.ನಾಗರಾಜು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News