ಗುಜರಾತ್‌ನಲ್ಲಿ 2 ಸಾವಿರ ಗರ್ಭಿಣಿಯರಿಂದ ಯೋಗ ದಾಖಲೆ

Update: 2016-06-21 18:33 GMT

ಅಹ್ಮದಾಬಾದ್, ಜೂ.21: ರಾಜಕೋಟಾದಲ್ಲಿ ಸುಮಾರು 2 ಸಾವಿರ ಗರ್ಭಿಣಿ ಮಹಿಳೆಯರು ಯೋಗವನ್ನು ಪ್ರದರ್ಶಿಸುವ ಮೂಲಕ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ಗುಜರಾತ್‌ನಾದ್ಯಂತ ಸುಮಾರು 40 ಸಾವಿರ ವೇದಿಕೆಗಳಲ್ಲಿ ಇಂದು ನಡೆಸಲಾದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 1.25 ಕೋಟಿ ಜನರು ಭಾಗವಹಿಸಿದ್ದರು.

ಅಹ್ಮದಾಬಾದ್‌ನ ಜಿಎಂಡಿ ಮೈದಾನದಲ್ಲಿ ಜರಗಿದ ರಾಜ್ಯಮಟ್ಟದ ಸಮಾರಂಭದಲ್ಲಿ ರಾಜ್ಯಪಾಲ ಒ.ಪಿ.ಕೊಹ್ಲಿ, ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್, ಅನೇಕ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಾಯಕರು ಪಾಲ್ಗೊಂಡಿದ್ದರು. ಗುಜರಾತ್‌ನ 40 ಸಾವಿರ ಕಡೆಗಳಲ್ಲಿ ಆಚರಿಸಲಾದ 2ನೆ ಅಂತಾರಾಷ್ಟ್ರೀಯ ಯೋಗ ದಿನ ಸಮಾರಂಭಗಳಲ್ಲಿ ಸುಮಾರು 1.25 ಕೋಟಿ ಜನರು ಭಾಗವಹಿಸಿದ್ದರು. 2 ಸಾವಿರ ಬಸುರಿ ಹೆಂಗಸರು ಯೋಗಾಸನ ಪ್ರದರ್ಶಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಇದೇ ವೇಳೆ, 8 ಸಾವಿರ ಮಕ್ಕಳು ಇದೇ ಮೈದನದಲ್ಲಿ ಮಾನವ ಸರಪಳಿಯೊಂದನ್ನು ನಿರ್ಮಿಸುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆಂದು ಕಾರ್ಯಕ್ರಮದ ಬಳಿಕ ಆನಂದಿ ಬೆನ್ ಪತ್ರಕರ್ತರಿಗೆ ತಿಳಿಸಿದರು. ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು, ಶಾಸಕರು, ಕಾರ್ಪೊರೇಟರ್‌ಗಳು ಹಾಗೂ ಬಿಜೆಪಿ ನಾಯಕರೊಂದಿಗೆ ಮುಖ್ಯಮಂತ್ರಿ ಸುಮಾರು 40 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News