ಅಡಿಕೆ ಫಸಲಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ: ಡಾ. ತಿಪ್ಪೇಶಿ
ಸಾಗರ, ಜೂ.22: ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಳೆ ಇಲ್ಲದೆ ಅಡಿಕೆ ತೋಟಗಳು ಒಣಗಿ, ಜೊತೆಗೆ ಇರುವ ಅಡಿಕೆ ಮರಗಳಲ್ಲಿ ಮೊದಲು ಬಿಟ್ಟ ಪಿಂಗಾರ ಒಣಗಿದ್ದು, ಈ ಬಾರಿ ಅಡಿಕೆ ಫಸಲಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ತಿಪ್ಪೇಶಿ ಹೇಳಿದ್ದಾರೆ.
ಇಲ್ಲಿನ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಕೋರಿಕೆ ಮೇರೆಗೆ ಈಚೆಗೆ ತಾಲೂಕಿನ ಅಡಿಕೆ ತೋಟಗಳಿಗೆ ಭೇಟಿ ನೀಡಿದ ತಜ್ಞರ ತಂಡ ಮುಂಗರವಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ವಿಪರೀತ ಬಿಸಿಲಿನಿಂದ ಸಾವಿರಾರು ಎಕರೆ ಅಡಿಕೆ ತೋಟಗಳು
ಾಶವಾಗಿದೆ ಎಂದು ಅಭಿಪ್ರಾಯಿಸಿದರು. ಹಾಲಿ ಉಂಟಾದ ಹಾನಿಯಿಂದ ಶೇ.40ರಷ್ಟು ಅಡಿಕೆ ಫಸಲು ಕುಸಿಯು ವುದರಿಂದ ಬೆಳೆಗಾರರು ಉಪ ಬೆಳೆ ತೆಗೆಯುವ ಬಗ್ಗೆ ಗಮನಹರಿಸಬೇಕು. ಇಂತಹ ಸಂದರ್ಭದಲ್ಲಿ ಬೆಳೆಗಾರರು ದೃತಿಗೆಡಬಾರದು. ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಫಸಲಿಗೆ ಪೂರಕವಾದ ಔಷದೋಪಚಾರ ಕೈಗೊಳ್ಳುವಂತೆ ಸಲಹೆ ನೀಡಿದರು.
ತಾಲೂಕಿನ ಕೇಡಲಸರ, ನಂದಿಗೋಡು, ವರದಾಮೂಲ, ಭೀಮನಕೋಣೆ, ಕೋಣನಕಟ್ಟೆ, ಈಳಿ, ಕೌತಿ ಇನ್ನಿತರೆ ಭಾಗಗಳಲ್ಲಿನ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೃಷಿ ಕಾಲೇಜಿನ ಡಾ. ಗಂಗಾಧರ್, ಡಾ. ಶಿವಣ್ಣ, ದೀಪ್ತಿ, ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್, ಕೆ.ಎಸ್.ಸುಬ್ರಾವ್, ಈಳಿ ಶ್ರೆಧರ್ ಇನ್ನಿತರರು ಉಪಸ್ಥಿತರಿದ್ದರು.