‘ಜವಾಬ್ದಾರಿ ನಿಭಾಯಿಸಿ ಯೋಜನೆ ರೂಪಿಸಿ’ಘೋಷ ವಾಕ್ಯದೊಂದಿಗೆ ಜನಸಂಖ್ಯಾ ದಿನ ಆಚರಣೆ
ಮಡಿಕೇರಿ, ಜೂ.22 :ಜವಾಬ್ದಾರಿ ನಿಭಾಯಿಸಿ ಯೋಜನೆ ರೂಪಿಸಿ ಎಂಬ ಘೋಷ ವಾಕ್ಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳುವ ಕುರಿತು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕುಟುಂಬ ಕಲ್ಯಾಣಾಧಿಕಾರಿ ಡಾ.ಆಶಾ ಅವರು ಜನಸಂಖ್ಯಾ ್ಪೋಟದಿಂದ ಆಗುವ ಪರಿಣಾಮಗಳು ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 5,54,519 ಜನಸಂಖ್ಯೆ ಇದ್ದು, 81 ಸಾವಿರ ದಂಪತಿಗಳು, 13,636 ಜನ ಒಂದು ಮಗು ಒಳಗೊಂಡಿರುವವರು, 39,338 ಮಂದಿ ಎರಡು ಮಗು ಇರುವವರು, 15,006 ಮಂದಿ ಮೂರು ಮಕ್ಕಳನ್ನು ಹೊಂದಿರುವವರು, 4,434 ನಾಲ್ಕು ಮಕ್ಕಳನ್ನು ಹೊಂದಿರುವವರು ಹಾಗೂ 2,179 ಮಂದಿ 5 ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರ ಸಂಖ್ಯೆ ಇ
ೆ ಎಂದು ಅವರು ಮಾಹಿತಿ ನೀಡಿದರು. ಜನಸಂಖ್ಯಾ ಸ್ಫೋಟ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇದೇ 27ರಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ಅಗತ್ಯ ಎಂದು ಸಲಹೆ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ ಪ್ರಧಾನ ಆಯುಕ್ತ ಕೆ.ಟಿ.ಬೇಬಿನ ಮ್ಯಾಥ್ಯೂ ಅವರು ರೇಡಿಯೊ, ಬೀದಿನಾಟಕ ಮೂಲಕ ಜಾಗೃತಿ ಮೂಡಿಸುವುದು ಅಗತ್ಯ. ಎನ್‌ಜಿಒ ಗಳ ಸಹಕಾರದಲ್ಲಿ ಆರೋಗ್ಯ ಶಿಕ್ಷಣ ನೀಡುವಂತಾಗಬೇಕು ಎಂದರು.
ಈ ಸಂದರ್ಭ ಜಿಲ್ಲಾ ಸರ್ಜನ್ ಡಾ.ಮುತ್ತಪ್ಪ, ಡಿಡಿಪಿಐ ಬಸವರಾಜು, ಆರ್.ಸಿಎಚ್. ಅಧಿಕಾರಿ ಡಾ.ಪಾರ್ವತಿ, ತಾಲೂಕು ವೈದ್ಯಾಧಿಕಾರಿ ಡಾ.ಗುರುರಾಜ್, ಡಾ.ರವಿಕುಮಾರ್, ಮಹಿಳಾ ಅಭಿವೃದ್ಧಿ ಅಧಿಕಾರಿ ಮುಮ್ತಾಝ್ ಮತ್ತಿತರರು ಉಪಸ್ಥಿತರಿದ್ದರು.