ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ
ಕಾರವಾರ, ಜೂ.22: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2016ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಹೋಬಳಿ ಹಾಗೂ ಬೆಳೆಗಳ ಪಟ್ಟಿ ಹೀಗಿದೆ. ಅಂಕೋಲಾ: ಅಂಕೋಲಾ ತಾಲೂಕಿನ ಬೆಳಲೆ, ಬಾಸಗೋಡ, ಬೇಲಿಕೇರಿ ಹೋಬಳಿಗಳಲ್ಲಿ ಮತ್ತು ಭಟ್ಕಳ ತಾಲೂಕಿನ ಸುಸಗಡಿ, ಮಾವಳ್ಳಿಯಲ್ಲಿ ಅಡಿಕೆ, ಕರಿಮೆಣಸುಗಳು. ಹಳಿಯಾಳ: ಹಳಿಯಾಳ ತಾಲೂಕಿನ ಮುರ್ಕವಾಡ, ಸಾಂಬ್ರಾಣಿ, ದಾಂಡೇಲಿಗಳಲ್ಲಿ ಮಾವು, ಬಾಳೆಕಂದು ಹಾಗೂ ಬಾಳೆಯನ್ನು ಅಂಗಾಂಶ ಕೃಷಿಯಗಿ ಬೆಳೆಯಲಾಗುತ್ತದೆ.
ಹೊನ್ನಾವರ: ಹೊನ್ನಾವರ ತಾಲೂಕಿನ ಮಾವಿನಕುರ್ವೆ, ಮಂಕಿ ಸೇರಿದಂತೆ ಕುಮಟಾ ತಾಲೂಕಿನಲ್ಲಿ ಕುಮಟಾ, ಗೋಕರ್ಣ, ಕೂಜಳ್ಳಿ, ಮಿರ್ಜಾನ ಪ್ರದೇಶಗಳಲ್ಲಿಯೂ ಅಡಿಕೆ, ಕರಿಮೆಣಸನ್ನು ಹವಾಮಾನ ಆಧಾರಿತ ಬೆಳೆಯಾಗಿ ಬೆಳೆಯಲಾಗುತ್ತಿದೆ. ಮುಂಡಗೋಡ: ತಾಲೂಕಿನ ಮುಂಡಗೋಡ, ಪಾಳಾದಲ್ಲಿ ಮಾವು, ಬಾಳೆಕಂದು, ಅಂಗಾಂಶ ಕೃಷಿ ಬಾಳೆಯಾಗಿ ಗುರುತಿಸಿಕೊಂಡಿದೆ. ಸಿದ್ದಾಪುರ ತಾಲೂಕಿನ ಕೊಂಡ್ಲಿ, ಕೋಡ್ಕಣಿ, ಉಂಬಳಮನೆಯಲ್ಲಿ ಅಡಿಕೆ, ಕರಿಮೆಣಸು ಹವಾಮಾನ ಆಧಾರಿತ ಬೆಳೆಯಾಗಿದೆ.
ಶಿರಸಿ ತಾಲೂಕಿನ ಶಿರಸಿ, ಸಂಪಖಂಡ, ಹುಲೇಕಲ್‌ದಲ್ಲಿ ಅಡಿಕೆ ಕರಿಮೆಣಸು ಹಾಗೂ ಬನವಾಸಿಯಲ್ಲಿ ಅಡಿಕೆ ಕರಿಮೆಣಸು, ಕಂದು ಬಾಳೆ, ಶುಂಠಿ ಹಾಗೂ ಜೋಯಡಾ ಾಲೂಕಿನಲ್ಲಿ ಸೂಪಾ, ಕುಂಬಾರವಾಡಾ, ಕ್ಯಾಸಲ್‌ರಾಕ್‌ನಲ್ಲಿ ಅಡಿಕೆ, ಕರಿಮೆಣಸು, ಯಲ್ಲಾಪುರ ತಾಲೂಕಿನ ಯಲ್ಲಾಪುರ, ಮಂಚಿಕೇರಿಯಲ್ಲಿ ಅಡಿಕೆ, ಕರಿಮೆಣಸು ಬೆಳೆಗಳಿಗೆ ವಿಮಾ ಯೋಜನೆಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ. ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. 2,25,000, ವಾಣಿಜ್ಯ ವಿಮಾ ಕಂತಿನ ದರ ಶೇ.12.02, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5,ಪ್ರತಿ ಹೆಕ್ಟೇರ್‌ಗೆ ಒಟ್ಟು ವಿಮಾ ಕಂತು ರೂ.27, 045 ಪ್ರತಿ ಹಕ್ಟೇರ್‌ಗೆ ರೈತರು ಪಾವತಿಸಬೇಕಾದ ವಿಮಾ ಕಂತು ರೂ.11,250 ಆಗಿರುತ್ತದೆ.
ಕರಿಮೆಣಸು
ಪ್ರತಿ ಹೆಕ್ಟೇರ್‌ಗೆ ರೂ. 37, 500 ವಾಣಿಜ್ಯ ವಿಮಾ ಕಂತಿನ ದರ ಶೇ.17.02, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5, ಪ್ರತಿ ಹೆಕ್ಟೇರ್‌ಗೆ ಒಟ್ಟು ವಿಮಾ ಕಂತು ರೂ. 6, 383 ಪ್ರತಿ ಹೆಕ್ಟೇರ್‌ಗೆ ರೈತರು ವಿಮಾ ಕಂತು ರೂ. 1,875 ಪಾವತಿಸಬೇಕಾಗುವುದು.
ಮಾವು
ಪ್ರತಿ ಹೆಕ್ಟೇರ್‌ಗೆ ರೂ. 62,500 ವಾಣಿಜ್ಯ ವಿಮಾ ಕಂತಿನ ದರ ಶೇ.8.02, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5,ಪ್ರತಿ ಹೆಕ್ಟೇರ್‌ಗೆ ಒಟ್ಟು ವಿಮಾ ಕಂತು ರೂ. 5,013 ಪ್ರತಿ ಹಕ್ಟೇರ್‌ಗೆ ರೈತರು ವಿಮಾ ಕಂತು ರೂ.3,125ನ್ನು ಪಾವತಿಸಬೇಕಾಗಿದೆ.
ಬಾಳೆ ಕಂದು
ಪ್ರತಿ ಹೆಕ್ಟೇರ್‌ಗೆ ರೂ. 1,25,000 ವಾಣಿಜ್ಯ ವಿಮಾ ಕಂತಿನ ದರ ಶೇ.12.02, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5, ಪ್ರತಿ ಹೆಕ್ಟೇರ್‌ಗೆ ಒಟ್ಟು ವಿಮಾ ಕಂತು ರೂ. 15,025, ಪ್ರತಿ ಹಕ್ಟೇರ್‌ಗೆ ರೈತರು ಪಾವತಿಸಬೇಕಾದ ವಿಮಾ ಕಂತು ರೂ. 6,250 ಆಗಿದೆ.
ಅಂಗಾಂಶ ಬಾಳೆ
ಪ್ರತಿ ಹೆಕ್ಟೇರ್‌ಗೆ 1.50 ಲಕ್ಷ ರೂ. ವಾಣಿಜ್ಯ ವಿಮಾ ಕಂತಿನ ದರ ಶೇ.12.02, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5, ಪ್ರತಿ ಹೆಕ್ಟೇರ್‌ಗೆ ಒಟ್ಟು ವಿಮಾ ಕಂತು ರೂ. 18,030, ಪ್ರತಿ ಹಕ್ಟೇರ್‌ಗೆ ರೈತರು ಪಾವತಿಸಬೇಕಾದ ವಿಮಾ ಕಂತು ರೂ.7,500 ಆಗಿದೆ.
ಶುಂಠಿ ಪ್ರತಿ ಹೆಕ್ಟೇರ್‌ಗೆ ರೂ. 93,750 ವಾಣಿಜ್ಯ ವಿಮಾ ಕಂತಿನ ದರ ಶೇ.13.02, ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5, ಪ್ರತಿ ಹೆಕ್ಟೇರ್‌ಗೆ ಒಟ್ಟು ವಿಮಾ ಕಂತು ರೂ. 12,206, ಪ್ರತಿ ಹಕ್ಟೇರ್‌ಗೆ ರೈತರು ಪಾವತಿಸಬೇಕಾದ ವಿಮಾ ಕಂತು ರೂ. 4,688 ಆಗಿದೆ.
amrakshane.nic.in
ಬೆಳೆ ಸಾಲ ಪಡೆಯುವ ಮತ್ತು ಪಡೆಯದ ರೈತರಿಗೆ ವಿಮಾ ಮೊತ್ತವು ಜಿಲ್ಲೆಗಳ ರೈತರಿಗೆ ಬೆಳೆವಾರು ಸರಾಸರಿ ಹಣಕಾಸು ಪ್ರಮಾಣಕ್ಕೆ ಸಮಾನಾಗಿರುತ್ತದೆ. ಮುಂಗಾರು ಹಂಗಾಮು ಯೋಜನೆಯ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್‌ಲೈನ್ ಮೂಲಕ ಪೋರ್ಟಲ್ ಮೂಲಕ ನೋಂದಾಯಿಸಬಹುದಾಗಿದೆ. ಬೆಳೆ ಸಾಲ ಪಡೆಯಲು ಜೂನ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ/ಕಂದಾಯ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.