×
Ad

ಎಂಇಎಸ್ ವಿದ್ಯಾ ಸಂಸ್ಥೆಯಲ್ಲಿ ಉಚಿತ ಬಸ್‌ಗೆ ಚಾಲನೆ

Update: 2016-06-22 23:28 IST

ಚಿಕ್ಕಮಗಳೂರು, ಜೂ.22: ದನಗರದ ಮಲೆನಾಡು ವಿದ್ಯಾ ಸಂಸ್ಥೆಯಲ್ಲಿ ಇಂದು 3 ನೂತನ ಬಸ್‌ಗಳನ್ನು ವಿದ್ಯಾರ್ಥಿಗಳ ಉಚಿತ ಸೇವೆಗಾಗಿ ಇಂದು ಸಂಸ್ಥೆಯ ಅಧ್ಯಕ್ಷ ಎನ್.ಕೇಶವ ಮೂರ್ತಿ ಹಾಗೂ ಗೌ. ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್ ವಿದ್ಯುಕ್ತ ಚಾಲನೆ ನೀಡಿದರು. ಬುಧವಾರ ಸಂಸ್ಥೆಯ ಆವರಣದಲ್ಲಿ ನಡೆದ ಸರಳ ಸಮಾರಂದಲ್ಲಿ ಬಸ್ಸುಗಳಿಗೆ ಚಾಲನೆ ನೀಡಿ ಡಾ.ಡಿ.ಎಲ್. ವಿಜಯಕುಮಾರ್ ಮಾತನಾಡಿ, ನಗರ ಹಾಗೂ ಗ್ರಾಮೀಣ ಬಾಗದಿಂದ ಬರುವ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಈ ಬಸ್ಸುಗಳು ಉಪಂೋಗವಾಗಲಿವೆ. ವಿದ್ಯಾ ರ್ಥಿಗಳು ಸುರಕ್ಷಿತವಾಗಿ ಕಾಲೇಜಿಗೆ ಬಂದು ಹೋಗಲು ಮತ್ತು ದ್ವಿಚಕ್ರವಾಹನಗಳ ರಾಟೆ, ಸುಗಮ ಸಂಚಾರ ಮುಂತಾದ ಕಾರಣಗಳಿಗಾಗಿ ಈ ಬಸ್ಸುಗಳು ಹೆಚ್ಚು ಉಪಯೋಗವಾಗಲಿವೆ ಎಂದರು.

ಕಳೆದ 6 ದಶಕಗಳ ಹಿಂದೆ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಅರಂಗೊಂಡ ಸಂಸ್ಥೆ ಇಂದು 3500 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸುಸಜ್ಜಿತ ಕಟ್ಟಡಗಳು, ವಾಚನಾಲಯ, ಉತ್ತಮ ಪ್ರಯೋಗಾಲಯ, ಕಂಪ್ಯೂಟರ್ ವ್ಯವಸ್ಥೆ, ವೈಪೈ ಸೇವೆಯೊಂದಿಗೆ, ಪ್ರತಿಷ್ಠಿತ ಈ ಶಿಕ್ಷಣ ಸಂಸ್ಥೆಯು ನೀಡಿರುವ ಸೌಲ್ಯಗಳನ್ನು ಉಪಯೋಗಿಸಿಕೊಂಡು, ಉತ್ತಮ ವಿದ್ಯಾಬ್ಯಾಸ ಮಾಡಿ ತಾವೂ ಉನ್ನತಿ ಸಾಧಿಸುವುದರೊಂದಿಗೆ, ಸಂಸ್ಥೆಗೆ ಹೆಸರು ತರಬೇಕೆಂದು ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕರಾದ ಎಂ.ವಿ. ಷಡಾಕ್ಷರಿ, ಕನಕರಾಜ್, ಚಂದ್ರಶೇಖರ್, ಶ್ರೀಮತಿ ಜಯಶ್ರೀ ಜೋಷಿಯವರು, ವ್ಯವಸ್ಥಾಪಕಿ ಶ್ರೀಮತಿ ಶಾಂತಕುಮಾರಿ ಹಾಗೂ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News