×
Ad

ಮಡಿಕೇರಿ: ಗುಂಡೇಟಿಗೆ ಮೂರು ಆನೆಗಳು ಬಲಿ

Update: 2016-06-22 23:36 IST

ಮಡಿಕೇರಿ ಜೂ.22: ನಾಗರಹೊಳೆ ಅರಣ್ಯದಂಚು ಹಾಗೂ ಕಾಫಿ ತೋಟದಲ್ಲಿ ಒಟ್ಟು 3 ಆನೆಗಳು ಮೃತ ಪಟ್ಟಿರುವ ಘಟನೆ ಮಂಗಳ ವಾರ ನಡೆದಿದೆ. ಸುಳುಗೋಡು ಗ್ರಾಮದ ಕಾಫಿ ತೋಟದಲ್ಲಿ 45 ವರ್ಷ ಪ್ರಾಯದ ಒಂದು ಗಂಡಾನೆ ಮೃತಪಟ್ಟಿದ್ದರೆ, ಕಾರ್ಮಾಡು ಪೈಸಾರಿ ಹಾಗೂ ತಟ್ಟೆಕೆರೆ ಹಾಡಿ ಬಳಿ 40 ರಿಂದ 45 ವರ್ಷ ಪ್ರಾಯದ 2 ಗಂಡಾನೆಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ.

 ಸುಳುಗೋಡು ಗ್ರಾಮದಲ್ಲಿ ಸಾವಿಗೀಡಾದ ಕಾಡಾನೆ ದೇಹದಲ್ಲಿ ಎರಡು ಮದ್ದು ಗುಂಡುಗಳು ಪತ್ತೆಯಾಗಿದ್ದು, ಶವ ಪರೀಕ್ಷೆ ಸಂದರ್ಭ ಸಿಕ್ಕಿದ ಮದ್ದುಗುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಆನೆಯ ಹೊಟ್ಟೆಯ ಭಾಗದಲ್ಲಿ ಹಾಗೂ ಹೃದಯದಲ್ಲಿ ಪ್ರತ್ಯೇಕವಾಗಿ ಎರಡು ಗುಂಡುಗಳು ದೊರೆತಿವೆ. ಹೊಟ್ಟೆಯಲ್ಲಿ ಮಾಂಸದೊಂದಿಗೆ ಬೆರೆತಿರುವ ಒಂದು ಗುಂಡು ಕೆಲವು ದಿನಗಳ ಹಿಂದಿನದ್ದು ಎನ್ನಲಾಗಿದೆ. ಅಲ್ಲದೆ, ಅದನ್ನು ಹೊರತು ಪಡಿಸಿ ಹೃದಯ ಶ್ವಾಸಕೋಶದಲ್ಲಿ ಹೊಸದಾಗಿ ಒಳಹೊಕ್ಕಿರುವ ಒಂದು ಗುಂಡು ದೊರೆತಿದ್ದು, ಕಾಡಾನೆ ಗುಂಡೇಟಿನಿಂದ ಸಾವಿಗೀಡಾಗಿರುವುದು ದೃಢವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಕಾರ್ಮಾಡು ಪೈಸಾರಿಯಲ್ಲಿ ಸತ್ತಿರುವ ಆನೆಯ ದಂತಗಳನ್ನು ಕಳವು ಮಾಡಿರುವುದರಿಂದ ಇದೂ ಕೂಡ ಗುಂಡೇಟಿಗೆ ಬಲಿಯಾಗಿರಬಹದು. ಇದರ ಪತ್ತೆಗೆ ಶ್ವಾನ ದಳವನ್ನು ಕರೆಸಿ ತನಿಖೆ ನಡೆಸಲಾಗುತ್ತದೆ. ಇನ್ನು ತಟ್ಟೆಕೆರೆ ಹಾಡಿಯ ಬಳಿ ಮೃತಪಟ್ಟಿರುವ ಆನೆ ಅರಣ್ಯದಂಚಿನ ಕಂದಕಕ್ಕೆ ಬಿದ್ದು ಸತ್ತಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಣಾ ಕೇಂದ್ರದ ನಿರ್ದೇಶಕ ಕಾಂತರಾಜು ಹೇಳಿದರು

 ಆನೆಯ ದೇಹವನ್ನು ತೋಟದಿಂದ ಸಾಕಾನೆಗಳ ಮೂಲಕ ಕಾಡಿನಂಚಿಗೆ ತರುವ ಪ್ರಯತ್ನ ವಿಫಲಗೊಂಡ ಹಿನ್ನೆಲೆಯಲ್ಲಿ ಕ್ರೇನ್ ಬಳಸಿ ಲಾರಿಯಲ್ಲಿ ತರಲಾಯಿತು. ಕಳೆದ ರವಿವಾರ ರಾತ್ರಿ ಸುಳುಗೋಡು ಗ್ರಾಮದ ಕೊಕ್ಕೇಂಗಡ ಪ್ರಶು ಎಂಬವವರ ತೋಟದಲ್ಲಿ ಸುಮಾರು 25 ವರ್ಷದ ಗಂಡು ಕಾಡಾನೆಯ ಕಳೇಬರ ಪತ್ತೆಯಾಗಿತ್ತು. ಈ ಬಗ್ಗೆ ತಿತಿಮತಿ ವಲಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News