×
Ad

ಅಂಗನವಾಡಿಗಳ ವಸ್ತುಸ್ಥಿತಿಯ ಮಾಹಿತಿಗೆ ‘ಬಾಲಾಂಗಳ’

Update: 2016-06-22 23:43 IST

ಬೆಂಗಳೂರು, ಜೂ. 22: ರಾಜ್ಯದಲ್ಲಿರುವ ಎಲ್ಲ ಅಂಗನ ವಾಡಿಗಳ ವಸ್ತುಸ್ಥಿತಿಯ ಮಾಹಿತಿ ಪಡೆಯಲು ‘ಬಾಲಾಂಗಳ’ ತಂತ್ರಾಂಶವನ್ನು ತಯಾರು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
 ಬುಧವಾರ ನಗರದ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಅಂಗನವಾಡಿಗಳಲ್ಲಿಯೂ ಮಕ್ಕಳ ಸ್ನೇಹಿ ಹಾಗೂ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಂತ್ರಾಂಶವನ್ನು ಸಿದ್ಧ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
  ರಾಜ್ಯದಲ್ಲಿ ಒಟ್ಟಾರೆ 64,558 ಅಂಗನವಾಡಿ ಕೇಂದ್ರಗಳಲ್ಲಿ 40,835 ಕೇಂದ್ರಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಇನ್ನುಳಿದ 23,723 ಕೇಂದ್ರಗಳ ವಾಸ್ತವ ಸ್ಥಿತಿಗಳನ್ನು ತಿಳಿದು ಸ್ವಂತ ಕಟ್ಟಡಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮಕ್ಕಳ ಮೂಲಭೂತ ಅಗತ್ಯಗಳಾದ ಶೌಚಾಲಯ, ಆಟದ ಮೈದಾನ ಸೇರಿದಂತೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಸರಕಾರದ ಕರ್ತವ್ಯ ಎಂದು ಸಚಿವೆ ಉಮಾಶ್ರೀ ಹೇಳಿದರು.
 ಇನ್ನು ಕೆಲವೆ ದಿನಗಳಲ್ಲಿ ಬಾಲಾಂಗಳ ತಂತ್ರಾಂಶವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು. ಹಾಗೂ ಅಂಗನವಾಡಿಗಳ ಅಭಿವೃದ್ಧಿಗೆ ಜನತೆಯಿಂದ ಸಲಹೆ ಸೂಚನೆಗಳನ್ನು ಮುಕ್ತವಾಗಿ ಸ್ವೀಕರಿಸಿ, ಅಭಿವೃದ್ಧಿಗೊಳಿಸ ಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News