×
Ad

ಸೈನಿಕ ಶಾಲೆ : ಎರಡು ದಿನಗಳ ಕಾರ್ಯಾಗಾರ

Update: 2016-06-23 23:13 IST

 ಕುಶಾಲನಗರ, ಜೂ.23: ಸೈನಿಕ ಶಾಲೆ ಕೊಡಗು ಇಲ್ಲಿ ವರ್ತನಾತ್ಮಕ ಚಿಕಿತ್ಸೆ ವಿಷಯವನ್ನಾಧರಿಸಿ ಎರಡು ದಿನಗಳ ಕಾರ್ಯಾಗಾರವು ಜೂನ್ 21ರಿಂದ 22ರವರೆಗೆ ನಡೆಯಿತು.

ಈ ಕಾರ್ಯಾಗಾರವನ್ನು ಅಂತಾರಾಷ್ಟ್ರೀಯ ಖ್ಯಾತವೆತ್ತ ಡಾ. ಭರತ್ ಚಂದ್ರರವರು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ಸೈನಿಕ ಶಾಲೆಯ ಹಿರಿಯ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕಾರ್ಯಾಗಾರದಲ್ಲಿ ಮಕ್ಕಳು ತಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ವಿಧಾನ, ವೇಗವಾಗಿ ಓದುವ ವಿಧಾನ, ಮಾನಸಿಕ ಒತ್ತಡವನ್ನು ತಡೆದುಕೊಳ್ಳುವ ವಿಧಾನ, ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನ ಹಾಗೂ ಸೃಜನಾತ್ಮಕ ಚಿಂತನೆ ಬೆಳೆಸಿಕೊಳ್ಳುವ ವಿಧಾನಗಳನ್ನು ಆಧರಿಸಿ ತರಬೇತಿ ನೀಡಲಾಯಿತು. ಈ ಕಾರ್ಯಾಗಾರದಲ್ಲಿ ಶಾಲೆಯ ಪ್ರಾಂಶುಪಾಲರಾದ ಕ್ಯಾಪ್ಟನ್ ಬೆನ್ ಎಚ್ ಬೆರ್ಸ ನ್, ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಮನಿಷಾ ಶರ್ಮಾ, ಬೋಧಕ ವರ್ಗ ಮತ್ತು ಶಾಲೆಯ ಹಿರಿಯ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News