×
Ad

ಉದ್ಯೋಗ ಮೇಳ: 76 ಉದ್ಯೋಗಾಕಾಂಕ್ಷಿಗಳಿಗೆ ಪ್ರಮಾಣಪತ್ರ ವಿತರಣೆ

Update: 2016-06-23 23:14 IST

ಸಾಗರ, ಜೂ.23: ಯುವಜನರ ಕೈಗೆ ಉದ್ಯೋಗ ದೊರಕಿಸಿ ಕೊಟ್ಟಾಗ ಅವರು ಸ್ವಾವಲಂಬಿ ಬದುಕು ನಡೆಸಲು ಅವಕಾಶವಾಗುತ್ತದೆ ಎಂದು ಜಿಪಂ ಸದಸ್ಯೆ ಅನಿತಾ ಕುಮಾರಿ ಹೇಳಿದ್ದಾರೆ. ಇಲ್ಲಿನ ಸ್ಯಾನ್ ಐಟಿ ಸಂಸ್ಥೆ ವತಿಯಿಂದ ಇತ್ತೀಚೆಗೆ ನಡೆದ ಉದ್ಯೋಗ ಮೇಳದಲ್ಲಿ ಆಯ್ಕೆ ಯಾದ 76 ಉದ್ಯೋಗಾಕಾಂಕ್ಷಿಗಳಿಗೆ ಗುರುವಾರ ಉದ್ಯೋಗ ಪ್ರಮಾಣಪತ್ರವನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಪದವೀಧರ ನಿರುದ್ಯೋಗಿಗಳು ಉದ್ಯೋಗ ಕ್ಕಾಗಿ ಬೇರೆ ಬೇರೆ ಕಡೆ ಅಲೆಯು ವುದನ್ನು ತಪ್ಪಿಸಲು ಸ್ಯಾನ್ ಐಟಿ ಸಂಸ್ಥೆ ಉದ್ಯೋಗ ಮೇಳವನ್ನು ಆಯೋಜಿಸುವ ಜೊತೆಗೆ ಅರ್ಹರಿಗೆ ಉದ್ಯೋಗ ಪ್ರಮಾಣಪತ್ರವನ್ನು ವಿತರಿಸು ತ್ತಿದೆ. ಉದ್ಯೋಗ ಪಡೆದವರು ಸಂಸ್ಥೆಯ ನೆರವನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ನೀವು ನೌಕರಿಗೆ ಸೇರಿದ ಮೇಲೆ ನಿ

ಮ್ಮಂತೆ ನಿರುದ್ಯೋಗಿಗಳಾಗಿರುವವರಿಗೆ ನಿಮ್ಮ ಹಂತದಲ್ಲಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಬೇಕು ಎಂದರು.ದೊಡ್ಡದೊಡ್ಡ ನಗರಗಳಿಗೆ ಹೋದ ತಕ್ಷಣ ಹುಟ್ಟಿದ ಊರು, ಸಹಕಾರ ನೀಡಿದ ಜನ, ಪೋಷಕರನ್ನು ಯುವಜನರು ಮರೆಯುತ್ತಿದ್ದಾರೆ. ನಿಮ್ಮ ಏಳಿಗೆಗಾಗಿ ಶ್ರಮಿಸಿದ ಹೆತ್ತವರನ್ನು ಮರೆಯುವುದು ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲೆ ಇದ್ದರೂ ಹುಟ್ಟಿದ ಊರಿನ ಋಣವನ್ನು ತೀರಿಸುವ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಸಲಹೆ ನೀಡಿದರು. ಸ್ಯಾನ್ ಸಿಟಿ ಸಂಸ್ಥೆಯ ಸ್ಥಳೀಯ ಸಂಚಾಲಕ ಕೆ.ಎಲ್.ಭೋಜರಾಜ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ನಡೆಸಿದ ಉದ್ಯೋಗ ಮೇಳದಲ್ಲಿ ನೂರಾರು ಜನರಿಗೆ ಉದ್ಯೋಗ ಸಿಕ್ಕಿರುವುದು ಸಂತೋಷದ ಸಂಗತಿ. ಈಗ ಆಯ್ಕೆಯಾಗಿರುವ 76 ಜನರಿಗೆ ಪ್ರಾರಂಭದಲ್ಲಿ ಪ್ರತಿವರ್ಷ 2.50 ಲಕ್ಷ ರೂ. ವೇತನ ಸಿಗಲಿದೆ. ನಮ್ಮ ಸಂಸ್ಥೆ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು 3 ತಿಂಗಳವರೆಗೆ ಗಮನಿಸಲಾಗುತ್ತದೆ. ಉದ್ಯೋಗಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಸಂಸ್ಥೆ ಅವರ ನೆರವಿಗೆ ಧಾವಿಸಲಿದೆ ಎಂದರು. ಮಲೆನಾಡಿನ ಭಾಗದ ವಿದ್ಯಾವಂತ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಹಾಗೂ ರಾಜ್ಯಮಟ್ಟದ ಕಂಪೆನಿಗಳು ಗುರುತಿಸಿದೆ. ಜೊತೆಗೆ ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸಲು ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಿಂದ ಪ್ರತಿ ಎರಡನೆ ಶನಿವಾರ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಹೇಶ್, ಡಾಫರ್‌ಡೈಲ್ ಸಂಸ್ಥೆಯ ಗ್ಲೆನ್, ಪ್ರೇಮಾ, ತಿಮ್ಮರಾಜ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News