×
Ad

ಕುರ್‌ಆನ್‌ನಿಂದ ಸಾಮಾಜಿಕ ನ್ಯಾಯ: ನ್ಯಾ.ಸೋಮಶೇಖರ್

Update: 2016-06-23 23:37 IST

ಬೆಂಗಳೂರು, ಜೂ. 23: ‘ಕುರ್‌ಆನ್’ ಓದಿದರೆ ಒಬ್ಬರಿಗೆ ನ್ಯಾಯ ಒದಗಿಸಬಹುದು ಎಂಬ ಮನೊೀಭಾವ ನಮ್ಮಲ್ಲಿ ಮೂಡಬೇಕೆಂದು ಬೆಂಗಳೂು ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಮೂರ್ತಿ ಕೆ.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ಸಲಾಮ್ ಸೆಂಟರ್ ಏರ್ಪಡಿಸಿದ್ದ ವಾರ್ತಾಭಾರತಿ ದಿನ ಪತ್ರಿಕೆ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅವರ ‘ಕನ್ನಡದಲ್ಲಿ ಕುರ್‌ಆನ್ ಅನುವಾದ-5ನೆ ಆವೃತ್ತಿ’ ಗ್ರಂಥಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಈಗಾಗಲೇ ಅನೇಕ ಕಾನೂನುಗಳನ್ನು ರೂಪಿಸಿದ್ದು, ಯಾವ ಕಾನೂನನ್ನು ಯಾವ ಸಂದರ್ಭದಲ್ಲಿ ಉಪಯೋಗಿಸಬೇಕೆಂದು ಇನ್ನು ಸರಿಯಾಗಿ ಗೊತ್ತಿಲ್ಲ. ಆದರೆ, ಸಿಆರ್‌ಪಿಸಿ ಅಡಿಯಲ್ಲಿರುವ 125, 126, 127 ಸೆಕ್ಷನ್‌ಗಳಲ್ಲಿ ನ್ಯಾಯ ಒದಗಿಸಬೇಕಾದರೆ, ಕುರ್‌ಆನ್‌ನಲ್ಲಿರುವ ಅಂಶಗಳು ಸಹಕಾರಿ ಆಗಬಹುದೇ ಎಂಬುವುದನ್ನು ಯೋಚಿಸುವ ಮನೋಭಾವ ಮೂಡಬೇಕೆಂದು ಅವರು ಹೇಳಿದರು.
  ಪ್ರತಿಯೊಂದು ಧರ್ಮವು ಮಾನವೀಯತೆಯ ಜೀವನ ರೂಪಿಸಬೇಕೆಂದು ಬೋಧನೆ ಮಾಡುತ್ತದೆ. ಅಲ್ಲದೆ, ನಮ್ಮ ದೇಶದಲ್ಲಿಯೂ ಅನೇಕ ಧರ್ಮ, ತತ್ವಗಳಿವೆ. ಹೀಗಾಗಿ, ಪ್ರತಿಯೊಬ್ಬರು ಎಲ್ಲ ಧರ್ಮಗ್ರಂಥಗಳ ಬಗ್ಗೆ ತಿಳಿದುಕೊಳ್ಳಬೇಕು. ಇವೆಲ್ಲವು ಒಂದು ಧರ್ಮಕ್ಕೆ ಸೀಮಿತಗೊಳ್ಳಬಾರದು ಎಂದ ಅವರು, ಅರೆಬಿಕ್ ಭಾಷೆಯಲ್ಲಿರುವ ಪವಿತ್ರ ಕುರ್‌ಆನ್ ಅನ್ನು ಕನ್ನಡಕ್ಕೆ ಅನುವಾದ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ಕುರ್‌ಆನ್ ಬಗ್ಗೆ ಕನ್ನಡಿಗರು ತಿಳಿದುಕೊಳ್ಳಬಹುದು ಎಂದು ನುಡಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್. ಸಿ.ಶಿವರಾಮು ಮಾತನಾಡಿ, ಧರ್ಮ ಗ್ರಂಥಗಳನ್ನು ಓದುವ ಜೊತೆಗೆ ಅದರಲ್ಲಿನ ತತ್ವಗಳನ್ನು ನಾವು ಪಾಲನೆ ಮಾಡಬೇಕಾಗಿದೆ. ಆದರೆ, ಇದೀಗ ಯಾರು ಸಹ ಧರ್ಮಗ್ರಂಥದ ತತ್ವಗಳನ್ನು ಪಾಲನೆ ಮಾಡಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
  ಕವಿ ಸಿದ್ದಯ್ಯ ಪುರಾಣಿಕ ಅವರು, 1977ರ ಸಾಲಿನಲ್ಲಿ ಕುರ್‌ಆನ್ ಗ್ರಂಥವನ್ನು ಕನ್ನಡದಲ್ಲಿ ಅನುವಾದ ಮಾಡಿದ್ದರು ಎಂದ ಅವರು, ಎಲ್ಲ ಧರ್ಮಗ್ರಂಥಗಳು ಸಮಾನತೆಯ ಸಂದೇಶವನ್ನು ಹೇಳಿವೆ. ಹೀಗಾಗಿ, ಧರ್ಮ ಯಾವುದೇ ಇರಲಿ, ಜಾತಿ ಯಾವುದೇ ಇರಲಿ ನಮ್ಮಲ್ಲಿನ ನೀತಿ ಬಹುಮುಖ್ಯ ಎಂದು ಅಭಿಪ್ರಾಯಿಸಿದರು.
5 ಸಾವಿರ ವಿತರಣೆ: ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ಸಲಾಮ್ ಸೆಂಟರ್ ಹಮ್ಮಿಕೊಂಡಿದ್ದ ವಾರ್ತಾಭಾರತಿ ದಿನಪತ್ರಿಕೆ ಪ್ರಧಾನ ಸಂಪಾದಕ ಅಬ್ದುಸ್ಸಲಾ್ ಪುತ್ತಿಗೆ ಅವರ ‘ಕನ್ನಡದಲ್ಲಿ ಕುರ್‌ಆನ್ ಅನುವಾದ-5ನೆ ಆವೃತ್ತಿ’ ಗ್ರಂಥಗಳ ವಿತರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಐದು ಸಾವಿರಕ್ಕೂ ಅಧಿಕ ಗ್ರಂಥಗಳನ್ನು ವಿತರಿಸಲಾಯಿತು.
ಕನ್ನಡದಲ್ಲಿ ಕುರ್‌ಆನ್ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಹಿರಿಯ ವಕೀಲ ಜೈರಾಮ್ ಅವರು, ಕುರ್‌ಆನ್ ಕನ್ನಡ ಭಾಷೆಗೆ ಅನುವಾದಗೊಂಡಿರುವುದು ಸಂತಸ ತಂದಿದೆ. ನಾನು ಮೊದಲ ಸಂಚಿಕೆ ಓದಿದ್ದೆ. ಅದರಲ್ಲಿನ ಕೆಲವು ತತ್ವಗಳು, ಮಾನವೀಯತೆಯ ಸಂದೇಶಗಳನ್ನು ಎಲ್ಲ ಧರ್ಮದವರು ಅನುಸರಿಸಬಹುದು ಎಂದರು.
ಸಲಾಮ್ ಸೆಂಟರ್‌ನ ಅಧ್ಯಕ್ಷ ಸೈಯದ್ ಹಮೀದ್ ಮೊಹ್ಸಿನ್, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ಎಚ್.ವಿ.ಪ್ರವೀಣ್‌ಗೌಡ, ಪಿ.ಸುಧಾಕರ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News