ಮುಖ್ಯಮಂತ್ರಿಗೆ ಮುತ್ತಿನ ಭಾಗ್ಯ
ಬೆಂಗಳೂರು, ಜೂ.26: ಅರಮನೆ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳೆಯೊಬ್ಬಳು ವೇದಿಕೆಯಲ್ಲೇ ಸಿಹಿ ಮುತ್ತು ನೀಡಿದ ಘಟನೆ ಸುದ್ದಿಗೆ ಗುದ್ದು ನೀಡಿದೆ.
ವಿವಾಹಿತೆ ಗಿರಿಜಾ ಶ್ರೀನಿವಾಸ್ ಎಂಬಾಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಫೋಟೊಕ್ಕೆ ಪೋಸ್ ನೀಡಿದರು. ಸಿದ್ದರಾಮಯ್ಯ ಮಹಿಳೆಯ ತಲೆಗೆ ಸಲುಗೆಯಿಂದಲೇ ಕೈ ಇಟ್ಟರು. ಇದೆ ಅವಕಾಶವನ್ನು ಬಳಸಿಕೊಂಡ ಆಕೆ ಸಿಎಂ ಕೆನ್ನೆಗೆ ಸಿಹಿ ಮುತ್ತು ನೀಡಿ ಅಲ್ಲಿಂದ ತೆರಳಿದರು. ಸಿದ್ದರಾಮಯ್ಯ ಈ ಅನಿರೀಕ್ಷಿತ ಘಟನೆಯಿಂದಾಗಿ ಮುಜುಗರಕ್ಕೊಳಗಾದರೂ ತೋರ್ಪಡಿಸಲಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಅಮೃತಪುರ ತಾ.ಪಂ ಸದಸ್ಯೆ "ನಮ್ಮ ಸಮುದಾಯದಿಂದ ಮುಖ್ಯ ಮಂತ್ರಿ ಹುದ್ದೆಗೇರಿದ ಸಿದ್ದರಾಮಯ್ಯ ಅವರ ಬಗ್ಗೆ ಬಾಲ್ಯದಿಂದಲೂ ಅಭಿಮಾನವಿದೆ. ಇಂದು ನ್ನ್ನ ಜೀವನದ ಅವಿಸ್ಮರಣೀಯ ದಿನ. ಸಿದ್ದರಾಮಯ್ಯನವರನ್ನು ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿದೆ. ಇದರಿಂದ ಭಾವುಕಳಾಗಿ ಮುತ್ತು ನೀಡಿದೆ. ನಾನು ಮೂಲತ : ಸಿದ್ದರಾಮಯ್ಯನವರ ವರುಣಾ ಕ್ಷೇತ್ರದವಳು.-ಗಿರಿಜಾ ಶ್ರೀನಿವಾಸ್.