ಮಾದ್ಯಮಕ್ಕೆ ತನ್ನದೆ ಆದ ಶಕ್ತಿ ಇದೆ ಕ್ರೀಡಾಕೂಟದಲ್ಲಿ ಹೆಚ್.ಎಸ್. ಪ್ರಕಾಶ್ ಮಾತು
ಹಾಸನ,ಜೂ.26: ಪತ್ರಿಕ ಮಾದ್ಯಮಕ್ಕೆ ತನ್ನದೆ ಆದ ಶಕ್ತಿ ಹೊಂದಿದೆ ಎಂದು ಕ್ಷೇತ್ರದ ಶಾಸಕರಾದ ಹೆಚ್.ಎಸ್. ಪ್ರಕಾಶ್ ತಿಳಿಸಿದ್ದಾರೆ.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕಾರಣೀಗಳು, ಅಧಿಕಾರಿಗಳು ತಪ್ಪಿ ನಡೆದಾಗ ತಿದ್ದಿ ಹೇಳುವ ಶಕ್ತಿ ಮಾದ್ಯಮಕ್ಕೆ ಇದೆ ಎಂದರು. ಜಿಲ್ಲೆ ಅನೇಕ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆ. ಆದರೇ ಗ್ರಾಮೀಣ ಮಟ್ಟದ ಬಡ ಕ್ರೀಡಾಪಟುಗಳಿಗೆ ಪ್ರೋತ್ಸಹ ನೀಡಿ ಸಹಕಾರವನ್ನು ನೀಡದೆ ಮೂಲೆ ಗುಂಪಾಗಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಹಿಂದೆ ಇದ್ದ ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿ ಜನಾಂಗಕ್ಕೂ ಕೊಂಡೂಯ್ಯುವ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮಂಜುನಾಥ್ ದತ್ತ:
ಜನತಮಾದ್ಯಮ ದಿನಪತ್ರಿಕೆ ಸಂಪಾದಕರು ಮಂಜುನಾಥ್ ದತ್ತ ಅವರು ಕ್ರಿಕೆಟ್ ಬ್ಯಾಟ್ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಇಂದು ತುರ್ತು ಪರಿಸ್ಥಿತಿ ಏರಿದ ಕರಾಳ ದಿನಾ ಆಚರಣೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಆದ ತುರ್ತು ಪರಿಸ್ಥಿತಿಗೆ ದಿಕ್ಕಾರ ಹೇಳಬೇಕು ಎಂದರು. ಪತ್ರಕರ್ತರು ಮನುಷ್ಯರು ಎಂದ ಮೇಲೆ ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಆಗೇ ಸರ್ಕಾರವು ಅಸಹಕಾರ ಪ್ರದರ್ಶಿಸಿದಾಗ ಖಂಡಿಸುವ ಗುಣ ಹಾಗೂ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ಇದೆ ವೇಳೆ ಇದೆ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅಂದಿನ ದಿನವನ್ನು ನೆನಪಿಸಿಕೊಂಡರು.
ಹೆಚ್.ಎಸ್. ಅನೀಲ್ ಕುಮಾರ್
ನಗರಸಭೆ ಅಧ್ಯಕ್ಷರಾದ ಹೆಚ್.ಎಸ್. ಅನೀಲ್ ಕುಮಾರ್ ಮಾತನಾಡಿ, ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಇಂತಹ ಕ್ರೀಡೆಯಲ್ಲೂ ಆಗಾಗ್ಗೆ ಭಾಗವಹಿಸುವ ಮೂಲಕ ತಮ್ಮ ದೈಹಿಕ ಶಕ್ತಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು. ಹಿಂದೆ ಇದ್ದ ಲಗೋರಿ, ಚಿನ್ನಿ ದಾಂಡಲ್ ಇಂತಹ ಗ್ರಾಮೀಣ ಆಟಕ್ಕೂ ಪ್ರೋತ್ಸಹದ ಅಗತ್ಯವಿದೆ ಎಂದು ಸಲಹೆ ನೀಡಿದರು. ಯಾರೆ ತಪ್ಪು ಮಾಡಿದಾಗ ಪತ್ರಕರ್ತರು ಪೆನ್ನು ಎಂಬ ಅಸ್ತ್ರದಲ್ಲಿ ಚಾಟಿ ಹಿಡಿದು ಎಚ್ಚರಿಕೆ ನೀಡುವಂತ ಕೆಲಸ ಮಾಡಲಿ ಎಂದು ಹೇಳಿದರು.
ಜಾನಕಿ:
ಅಪರ ಜಿಲ್ಲಾಧಿಕಾರಿ ಜಾನಕಿ ಮಾತನಾಡಿ, ಇಂಥಹ ಅಪುರೂಪದ ಕ್ರೀಡಾಕೂಟದಲ್ಲಿ ಪತ್ರಕರ್ತರ ಕುಟುಂಬವು ಪಾಲ್ಗೊಳ್ಳಬೇಕು. ಪತ್ರಕರ್ತರು ಜಾಗೃತರಾಗಿ ಸಮಾಜದ ಮತ್ತು ಸರ್ಕಾರದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಯಾವುದೇ ಕೆಲಸವನ್ನು ಸವಲಾಗಿ ಸ್ವೀಕರಿಸಿದರೇ ಅದರಲ್ಲಿ ಶ್ರೇಯಸ್ಸು ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಕೆಂಚೇಗೌಡ :
ಪ್ರಜೋದಯ ದಿನಪತ್ರಿಕೆ ಸಂಪಾದಕ ಕಂಚೇಗೌಡ ಮಾತನಾಡಿ, ಪತ್ರಕರ್ತರುಗಳು ಲೋಪ ಮಾಡದೆ ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಿದರೇ ಅದರಲ್ಲಿ ಯಶಸ್ಸು ಕಾಣಬಹುದು. ಯಾವುದಾದರೂ ಕ್ರೌರ್ಯದ ವಿಚಾರ ಬಂದಾಗ ಜನರಿಗೆ ಹೆಚ್ಚು ತೋರಿಸುತ್ತೇವೆ ಆದರೇ ಸಮಾಜದ ಹಿತಾದೃಷ್ಠಿಯಲ್ಲಿ ಯಾವ ಉತ್ತಮ ಸಂದೇಶ ಕೊಡುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಇತ್ತಿಚಿಗೆ ನಗರದ ಹೊಸ ಬಸ್‌ನಿಲ್ದಾಣದಲ್ಲಿ ನಡೆದ ಘಟನೆ ಯಾವ ಗುಂಡಾಗಿರಿಯಲ್ಲ, ಅದು ಪ್ರೀತಿಯ ವಿಚಾರಕ್ಕೆ ನಡೆದ ಘಟನೆಯಾಗಿದೆ ಎಂದರು.
ರಾಹುಲ್ ಕುಮಾರ್ :
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮಾತನಾಡುತ್ತಾ, ಇಂತಹ ಕ್ರೀಡೆಯನ್ನು ವರ್ಷದಲ್ಲಿ ಒಂದು ಬಾರಿ ನಡೆಸದೆ ಸೌಹಾರ್ಧಿತವಾಗಿ ಇತರರೊಂದಿಗೆ ಸೇರಿ ನಡೆಸಬೇಕು. ಪೊಲೀಸ್ ಇಲಾಖೆ, ರೆವಿನ್ಯೂ, ನಗರಸಭೆ ಹಾಗೂ ಪತ್ರಕರ್ತರೊಂದಿಗೆ ಮುಂದಿನ ತಿಂಗಳು ಜುಲೈನಲ್ಲಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿ ಜಯಗೊಳಿಸಿದ ತಂಡಗಳಿಗೆ ಆಗಸ್ಟ್ 15 ರಂದು ಬಹುಮಾನ ನೀಡಲಾಗುವುದು ಎಂದರು. ಇದೆ ವೇಳೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ರವಿನಾಕಲಗೂಡು :
ಕ್ರೀಡಾಕೂಟದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿನಾಕಲಗೂಡು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಜಿಲ್ಲಾ ಪತ್ರಕರ್ತರ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಯಾವಾಗಲು ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಇಂತಹ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಒಬ್ಬರಿಗೊಬ್ಬರೂ ಸ್ನೇಹವನ್ನು ಬೆಳೆಸಲು ಸಹಾಯಕಾರಿಯಾಗಲಿದೆ ಎಂದರು. ಪತ್ರಕರ್ತರ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಶಿವಾನಂದ್ ತಗಡೂರು, ಹಾಸನ ಮಾದ್ಯಮ ದಿನಪತ್ರಿಕೆ ಸಂಪಾದಕರಾದ ಶೇಷಾದ್ರಿ, ವಾರ್ತಾ ಇಲಾಖೆ ಹಿರಿಯ ನಿರ್ದೇಶಕರಾದ ವಿನೋದ್ ಚಂದ್ರ, ಕಸಾಪ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ತಾಲ್ಲೂಕ್ ಅಧ್ಯಕ್ಷ ಗಂಜಲಗೂಡು ಗೋಪಾಲ್ ಇತರರು ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಹರೀಶ್ ನಿರೂಪಿಸಿದರು.