ಅರ್ಹರೆಲ್ಲರಿಗೂ ಪಡಿತರ ಚೀಟಿ: ಸಚಿವ ಯು.ಟಿ.ಖಾದರ್
ಬೆಂಗಳೂರು, ಜೂ. 26: ನಕಲಿ ಪಡಿತರ ಚೀಟಿಗಳಿಗೆ ಕಡಿವಾಣ ಹಾಕುವುದಲ್ಲದೆ, ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ದೊರಕಿಸಿಕೊಡಲು ಶ್ರಮಿಸುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಅಭಯ ನೀಡಿದ್ದಾರೆ.
ರವಿವಾರ ವಿಕಾಸಸೌಧದಲ್ಲಿ ಆಹಾರ ಇಲಾಖೆ ವಹಿಸಿಕೊಂಡ ಬಳಿಕ ಮೊಟ್ಟ ಮೊದಲ ಬಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸುವ ವೇಳೆ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆಗೆ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸಿ ಎಲ್ಲ ಅರ್ಹರಿಗೆ ಪಡಿತರ ಚೀಟಿ ದೊರಕಿಸಿಕೊಡಲಾಗುವುದು ಎಂದರು.
ಬಿಪಿಎಲ್-ಎಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹತೆ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಪಡಿತರ ಚೀಟಿ ನೀಡಲಾಗುವುದು ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯುವುದರಿಂದ ವಂಚಿತ ಕುಟುಂಬಗಳನ್ನು ಗುರುತಿಸಿ ಅವರಿಗೂ ಪಡಿತರ ಚೀಟಿ ನೀಡಲಾ ಗುವುದು ಎಂದು ಹೇಳಿದರು.
ನಕಲಿ ಪಡಿತರ ಚೀಟಿಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಅರ್ಹ ಎಲ್ಲ ಫಲಾನು ಭವಿಗಳಿಗೆ ಪಡಿತರ ಸಿಗಬೇಕೆಂಬುದು ‘ಅನ್ನಭಾಗ್ಯ’ ಯೋಜನೆಯ ಮೂಲ ಉದ್ದೇಶ ಎಂದ ಅವರು, ಬಿಪಿಎಲ್ ಅಥವಾ ಎಪಿಎಲ್ ಪ್ರತಿಯೊಂದು ಕುಟುಂಬದ ಬಳಿಯೂ ಒಂದುಪಡಿತರ ಚೀಟಿ ಇರುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ಹಿಂದಿನ ಆಹಾರ ಸಚಿವ ದಿನೇಶ್ ಗುಂಡೂರಾವ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದು, ಅವರು ರೂಪಿಸಿ ರುವ ಯೋಜನೆಗಳನ್ನು ಮುಂದುವರಿಸುವುದಲ್ಲದೆ, ಇಲಾಖೆ ಯನ್ನು ಜನರ ಸಮೀಪಕ್ಕೆ ಕೊಂಡೊಯ್ಯಲಾಗುವುದು ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಆಹಾರ ಇಲಾಖೆ ಜನ ಸಾಮಾನ್ಯರಿಗೆ ಹತ್ತಿರ ಇರುವ ಇಲಾಖೆ. ಹೀಗಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳನ್ನು ಸಜ್ಜು ಗೊಳಿಸಲು ಸಭೆ ಕರೆಯಲಾಗಿದೆ ಎಂದ ಅವರು, ಅಧಿಕಾರಿ ಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಬಿಪಿಎಲ್-ಎಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹತೆ ಹೊಂದಿರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಪಡಿತರ ಚೀಟಿ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯುವುದರಿಂದ ವಂಚಿತ ಕುಟುಂಬಗಳನ್ನು ಗುರುತಿಸಿ ಅವರಿಗೂ ಪಡಿತರ ಚೀಟಿ ನೀಡಲಾಗುವುದು
-ಯು.ಟಿ.ಖಾದರ್, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ