×
Ad

ಬಿಡಿಎ ಸದಸ್ಯರಾಗಿ ಬೈರತಿ, ಸೋಮಶೇಖರ್ ನೇಮಕ

Update: 2016-06-26 23:41 IST

ಬೆಂಗಳೂರು, ಜೂ. 26: ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ವಂಚಿತ ಯಶವಂತಪುರ ಕ್ಷೇತ್ರದ ಎಸ್.ಟಿ. ಸೋಮಶೇಖರ್ ಹಾಗೂ ಕೆ.ಆರ್.ಪುರ ಕ್ಷೇತ್ರದ ಬೈರತಿ ಬಸವರಾಜ್‌ರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ಬಿಡಿಎ ಕಾಯ್ದೆ 1976 ರ ಕಲಂ 3(3) ‘ಜಿ’ರ ಅಡಿಯಲ್ಲಿ ಮೇಲ್ಕಂಡ ಇಬ್ಬರು ಶಾಸಕರು ಹಾಗೂ ಬಾಣಸವಾಡಿಯ ಜಗದೀಶ್ ರೆಡ್ಡಿಯನ್ನು ಬಿಡಿಎ ಸದಸ್ಯರನ್ನಾಗಿ ನಾಮ ನಿರ್ದೇ ಶನ ಮಾಡಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಎನ್. ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News