ಕುಂಬಾರಗಟ್ಟೆಯಲ್ಲಿ ಮರಕ್ಕೆ ಕಾರು ಢಿಕ್ಕಿ:ಕಾರಿನಲ್ಲಿದ್ದ ನಾಲ್ವರೂ ಮೃತ್ಯು
ಸಕಲೇಶಪುರ, ಜೂ.28: ಮರಕ್ಕೆ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರೂ ಮೃತಪಟ್ಟಿರುವ ಘಟನೆ ತಾಲೂಕಿನ ಕುಂಬಾರಗಟ್ಟೆಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಬೆಂಗಳೂರು ಮೂಲದ ಕಂಪೆನಿ ಉದ್ಯೋಗಿಗಳು ಎಂದು ಊಹಿಸಲಾಗಿರುವ ಕೃಷ್ಣಕುಮಾರಿ, ಧನಂಜಯ, ಕಿಶನ್ ಮತ್ತು ನಿಶಾಂತ್ ಮೃತಪಟ್ಟ ದುರ್ದೈವಿಗಳು. ಇವರು ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿರುವುದರಿಂದ ಇವರ ಬಗೆಗಿನ ಹೆಚ್ಚಿನ ನಿಖರ ಮಾಹಿತಿ ಈ ವರೆಗೆ ಲಭ್ಯವಾಗಿಲ್ಲ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಮೃತರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಮೃತ ದೇಹಗಳನ್ನು ಪಟ್ಟಣದ ಕ್ರಾಪರ್ಡ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.