ವಿಫಲವಾದ ಪ್ರಚಾರ ಕಾರ್ಯಕ್ರಮ , ಕೊಳಚೆಯಲ್ಲಿ ಮೇಯರ್
Update: 2016-06-28 20:41 IST
ಪಣಜಿ , ಜೂ. 28 : ಕೊಳಚೆ ಪ್ರದೇಶದ ಕಳೆ ತೆಗೆಯುವ ಯಂತ್ರದ ಮೇಲೇರಿ ಪತ್ರಕರ್ತರಿಗೆ ಪೋಸು ನೀಡಲು ಹೋದ ಗೋವಾ ಮೇಯರ್ ಹಾಗೂ ಇತರ ಆರು ಮಂದಿ ಶುದ್ದೀಕರಣ ಮಾಡುವ ಬೋಟ್ ಮಗುಚಿ ಬಿದ್ದು ಅಪಾಯದಿಂದ ಅದೃಷ್ಟವಶಾತ್ ಪಾರಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ರವಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮೇಯರ್ ಸುರೇಂದ್ರ ಫುರ್ಟಾಡೋ , ಇಬ್ಬರು ಪತ್ರಕರ್ತರು ಹಾಗೂ ಇತರ್ ನಾಲ್ವರು ಬೋಟ್ ನಲ್ಲಿ ನಿಂತಿದ್ದಾಗ ಅದು ನಿಯಂತ್ರಣ ತಪ್ಪಿ ಕೊಳಚೆಗೇ ಬಿದ್ದಿದೆ. ಬೋಟ್ ನಲ್ಲಿದ್ದ ಎಲ್ಲರೂ ಕೊಳಚೆಗೇ ಬಿದ್ದಿದ್ದಾರೆ . ಮಗುಚಿ ಬಿದ್ದ ಬೋಟಿನಡಿ ಸಿಕ್ಕಿಕೊಂಡಿದ್ದ ಮೇಯರ್ ಅವರನ್ನು ಮೇಲಕ್ಕೆತ್ತಲಾಗಿದೆ.
ವೀಡಿಯೊ ನೋಡಿ :
Courtesy : IndiaToday