×
Ad

ಕಡಲಬ್ಬರಕ್ಕೆ ತತ್ತರಿಸಿದೆ ಕರಾವಳಿ

Update: 2016-06-28 23:58 IST

ಉಳ್ಳಾಲ ಕಡಲ ತೀರದಲ್ಲಿ ಕಡಲ್ಕೊರೆತ ಎರಡು ದಿನಗಳಿಂದ ತೀವ್ರಗೊಂಡಿದೆ. ಉಳ್ಳಾಲದ ಮುಕ್ಕಚ್ಚೇರಿ, ಹಿಲರಿ ನಗರ ಕೋಟೆಪುರ, ಸುಭಾಸ್ ನಗರ, ಕೈಕೊ, ಮೊಗವೀರ ಪಟ್ಣ , ಸೋಮೇಶ್ವರ, ಉಚ್ಚಿಲದಲ್ಲಿ ಮಂಗಳವಾರವೂ ಆಳೆತ್ತರದ ತೆರೆಗಳು ತೀರ ಪ್ರದೇಶದ ಕಲ್ಲಿನ ತಡೆಗೋಡೆಗಳಿಗೆ ಅಪ್ಪಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ಕೆಲವು ಕಡೆ ಕಲ್ಲಿನ ತಡೆಗೋಡೆಗಳು ಕಡಲ್ಕೊರೆತದ ತೀವ್ರತೆಯಿಂದಾಗಿ ಸಮುದ್ರಪಾಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor