×
Ad

ಆಧುನಿಕ ಯುಗದಲ್ಲಿ ಮಹಿಳೆ ಸಮಾಜದ ಕಣ್ಣು: ನಝೀರ್ ಅಹ್ಮದ್

Update: 2016-06-29 23:13 IST

ಕುಶಾಲನಗರ, ಜೂ. 29: ಮಹಿಳೆ ಸಂಸಾರದ ಕಣ್ಣು ಎಂಬ ಕಾಲವೊಂದಿತ್ತು, ಆದರೆ ಈ ಆಧುನಿಕ ಯುಗದಲ್ಲಿ ಸಮಾಜದ ಕಣ್ಣಾಗಿದ್ದಾಳೆ. ನಮ್ಮ ದೇಶ ಮುಂಚೂಣಿಯಲ್ಲಿದ್ದು ಇದಕ್ಕೆ ಮುಖ್ಯ ಪಾತ್ರ ಕೂಡ ಮಹಿಳೆಯರಿಗೆ ಸಲ್ಲಬೇಕು. ಮಹಿಳೆಯರು ಸಂಸಾರದ ಜೊತೆಗೆ ಸಮಾಜದ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆಯೆಂದು ಎಂದು ನಝೀರ್ ಅಹ್ಮದ್ ಹೇಳಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಮುಳ್ಳುಸೋಗೆ ಕಾರ್ಯಕ್ಷೇತ್ರ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿ ಬಸವನಹಳ್ಳಿ ಒಕ್ಕೂಟ ಪದಗ್ರಹಣ ಕಾರ್ಯಕ್ರಮವು ಇದು ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಆರ್.ಮಂಜುಳಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಸಮಾಜದಲ್ಲಿ ಯಾವ ರೀತಿ ಸ್ವಾವಲಂಬಿಯಾಗಿ ಬಾಳಬಹುದು ಮತ್ತು ಸ್ವ-ಉದೋಗ್ಯ ಮಾಡಬಹುದೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದುಕುವ ದಾರಿ ಕಲಿಸಿ ಕೊಡುವುದರಲ್ಲಿ ಮುಂದಾಗಿದೆ ಎಂದರು.

ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಹತ್ತಿಕುವ ಕೆಲಸ ನಮ್ಮದಾಗಿದೆ. ಆದ್ದರಿಂದ ಯಾವುದೇ ಮಹಿಳೆಯರು ಆತಂಕ ಪಡದೆ ಪೊಲೀಸರಿಗೆ ತಮ್ಮ ಗ್ರಾಮದಲ್ಲಿ ನಡೆಯುವ ಅಕ್ರಮ ಚಟುವಟಿಕೆ ನಡೆಸುವವರನ್ನು ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

ಮುಳ್ಳು ಸೋಗೆ ಗ್ರಾಪಂ ಅಧ್ಯಕ್ಷೆ ಭವ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಸಬಲೀಕರಣ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶಗಳನ್ನು ಮುಕ್ತ ಕಂಠದಿಂದ ಹೇಳಿ ಮಹಿಳೆಯರ ಬೆಳಕಿಗೆ ಸ್ವಾವಲಂಬಿ ಜೀವನದ ಜೀವನಾಡಿಯಾಗಿದೆಂದರು.

   

     ಈ ಸಂದರ್ಭದಲ್ಲಿ ತಾಪಂ. ಸದಸ್ಯೆ ಪುಷ್ಪಾ ಜನಾರ್ದನ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್ ಚಂದ್ರಮೋಹನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಕಾಶ್ ವೈ, ಮೇಲ್ವಿಚಾರಕ ಚಂದ್ರಶೇಖರ್, ನೂತನವಾಗಿ ಆಯ್ಕೆಯಾದ ವನಿತಾ, ಜಯಮ್ಮ, ಕಂಚನಾ, ಮಂಜುಳಾ, ವಾಣಿ, ಪದ್ಮಕೃಷ್ಣ ಮತ್ತಿತರರು ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News