ಕುಶಾಲನಗರ: ರಮಝಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಕುಶಾಲನಗರ, ಜೂ.29: ಇಲ್ಲಿನ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ರಮಝಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಟಿ.ಕುಮಾರ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಮುಸ್ಲಿಮರು ರಮಝಾನ್‌ನಲ್ಲಿ ಹಬ್ಬ ಆಚರಿಸಲಿಕ್ಕಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಿಂದೂ ಸಂಘಟನೆಯ ಮುಖಂಡರುಗಳ ಸಮ್ಮುಖದಲ್ಲಿ ಸಭೆ ನಡೆಸಿದರು.
ಇದೇ ಸಂದರ್ಭದಲ್ಲಿ ಇಲಾದ್ ಮಸೀದಿಯ ಅಧ್ಯಕ್ಷ ಮಾತನಾಡಿ, ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ರೀತಿಯಲ್ಲೆ ರಮಝಾನ್ ಹಬ್ಬವು ನಡೆಯುತ್ತದೆ. ಮಳೆಯಿಲ್ಲದಂತಹ ಸಂದರ್ಭದಲ್ಲಿ ಗಂಧದ ಕೋಟೆ ಬಳಿಯಲ್ಲಿರುವ ಈದ್ಗ್ಗಾ ಮೈದಾನದವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇವೆ, ಮಳೆ ಹೆಚ್ಚಿದ ಸಮಯದಲ್ಲಿ ತಮ್ಮ ತಮ್ಮ ಮಸೀದಿಗಳಲ್ಲೇ ಪ್ರಾರ್ಥನೆ ಮಾಡಲಾಗುತ್ತದೆಂದರು.
ಸಭೆಯಲ್ಲಿ ಅಪರಾಧ ಠಾಣಾಧಿಕಾರಿ ಪಿ.ಬಿ ಪೂಣಚ್ಚ ಮಾತನಾಡಿ, ಯಾವುದೇ ಗೊಂದಲಗಳು ನಡೆಯದಂತೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಭದ್ರತೆಯನ್ನು ನೀಡಲಾಗುವುದು ಆದ್ದರಿಂದ ತಾವು ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತನ್ವೀರ್, ತಾಹೀರ್, ಸಲೀಂ, ಖಾದರ್, ಅಝೀಝ್, ರಾಜೀವ್, ನಾಣಿ, ಪುಂಡರೀಕ್ಷ, ಮಂಜು, ಶಿವಸ್ವಾಮಿ, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.